

ಬೆಂಗಳೂರು: ಮಲ್ಲೇಶ್ವರದ ಕೋದಂಡರಾಮಪುರದಲ್ಲಿ ಜೂ. 10 ರಿಂದ 12ರವರೆಗೆ ಜೂನ್ 10 ರಂದು ಸಂಜೆ 5ಕ್ಕೆ ನಡೆಯಲಿರುವ ಕ್ಷೀರಕುಂಭ ಮೆರವಣಿಗೆಯಲ್ಲಿ ಕಳಸ ಹೊತ್ತು ಮಹಿಳೆಯರು ಭಾಗವಹಿಸಲಿದ್ದಾರೆ ಎಂದರು. ವಿಜೃಂಭಣೆಯಿಂದ ನಡೆಯಲಿದ್ದು, ದೇವಾಲಯದಲ್ಲಿ ಸಿದ್ಧತಾ ಕಾರ್ಯ ಬಿರುಸಾಗಿ ಸಾಗುತ್ತಿದೆ.
ಜೂನ್ 10 ರಂದು ಸಂಜೆ 5ಕ್ಕೆ ನಡೆಯಲಿರುವ ಕ್ಷೀರಕುಂಭ ಮೆರವಣಿಗೆಯಲ್ಲಿ ಕಳಸ ಹೊತ್ತು ನೂರಾರು ಮಹಿಳೆಯರು ಭಾಗವಹಿಸಲಿದ್ದಾರೆ ಎಂದು ಕಾಡುಮಲ್ಲೇಶ್ವರ ಗೆಳೆಯರ ಬಳಗ ಅಧ್ಯಕ್ಷ ಬಿ.ಕೆ. ಶಿವರಾಂ ತಿಳಿಸಿದ್ದಾರೆ.
ಜೂನ್ 11 ರಂದು ಬೆಳಗ್ಗೆ 6ಕ್ಕೆ ಗಂಗಮ್ಮ ದೇವಿಗೆ ಮಾಂಗಲ್ಯ ಧಾರಣೆ, ಮಹಾಮಂಗಳಾರತಿ ಮಧ್ಯಾಹ್ನ 12ಕ್ಕೆ ಕುಂಭನೈವೇದ್ಯ, ಮಹಾಮಂಗಳಾರತಿ ಸಂಜೆ 7ಕ್ಕೆ ಹಸಿ ಹೂವಿನ ಕರಗ ಆರಂಭವಾಗಲಿದೆ. ದೇವಸ್ಥಾನದಿಂದ ಹೊರಡುವ ಕರಗ ವೈಯಾಲಿ ಕಾವಲ್ ಹಾಗೂ ಮಲ್ಲೇಶ್ವರದ ವಿವಿಧ ರಸ್ತೆಗಳ ಮೂಲಕ ಬೆಳಗಿನ ಜಾವ 2 ಗಂಟೆಗೆ ದೇವಾಲಯ ತಲುಪಲಿದೆ ಎಂದು ತಿಳಿಸಿದರು.
ಜೂ. 12ರಂದು ಬೆಳಗ್ಗೆ 9.30ಕ್ಕೆ ಸಮುಂಗಲಿ ಪೂಜೆ ಮಧ್ಯಾಹ್ನ 12ಕ್ಕೆ ಕೋದಂಡರಾಮಪುರ ಪ್ರೌಢಶಾಲೆಯ ಆಟದ ಮೈದಾನದಲ್ಲಿ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5.30ಕ್ಕೆ ದೇವಿಯ ರಥೋತ್ಸವ ಜರುಗಲಿದೆ. ಬೆಂಗಳೂರು ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಜರುಗುವ ಐತಿಹಾಸಿ ಕರಗ ಉತ್ಸವ ಮಾದರಿಯಲ್ಲೇ ಅದೇ ಆಚರಣೆ, ಸಂಪ್ರದಾಯ, ಪೂಜಾ ವಿಧಾನಗಳು ಗಂಗಮ್ಮ ದೇವಿ ಹಸಿ ಕರಗದಲ್ಲೂ ಆಚರಣೆಗೊಳ್ಳಲಿದೆ ಎಂದು ಹೇಳಿದರು.