

ಗದಗ: ಗ್ರಾಮದಲ್ಲಿ ಗಂಗಾಮತ ಸಮುದಾಯದ ಜನ ಜಾಗೃತಿ ಸಭೆ ಹಾಗೂ ವಿದ್ಯಾರ್ಥಿಗಳಿಗೆ ನೋಟ್ಸ್ ಬುಕ್ ವಿತರಣಾ ಕಾಯ೯ಕ್ರಮ ಹಮ್ಮಿಕೊಳ್ಳಲಾಗಿತ್ತು. ಗದಗ ಜಿಲ್ಲಾ ನಿಜ ಶರಣ ಶ್ರೀ ಅಂಬಿಗರ ಚೌಡಯ್ಯ ಸಮಾಜ ಟ್ರಸ್ಟ್ ಪ್ರಧಾನ ಕಾಯ೯ದಶಿ೯ ಹಾಗೂ ಕಾಂಗ್ರೆಸ್ ಸಮಿತಿ ಮೀನುಗಾರರ ವಿಭಾಗ ಗದಗ ಬೆಟಗೇರಿ ಶಹರ ಘಟಕ ಅಧ್ಯಕ್ಷರಾದ ಸಂಗಮೇಶ ಹಾದಿಮನಿ ಮಾತನಾಡಿ ಮಕ್ಕಳಿಗೆ ಶಿಕ್ಷಣದೊಂದಿಗೆ ಬಾಂಧವ್ಯದ ಸಂಸ್ಕಾರವನ್ನು ಕಲಿಸಿರಿ ಎಂದು ಹೇಳುತ್ತ ಮಕ್ಕಳಿಗೆ ಆಸ್ತಿ ಮಾಡುವುದರ ಬದಲು ಉತ್ತಮ ಶಿಕ್ಷಣ ಕೊಡಿಸಿ ಗುರು ಹಿರಿಯರನ್ನು ಗೌರವಿಸುವುದನ್ನು ಕಲಿಸಿರಿ ಎಂದರು.
ಕಾAಗ್ರೆಸ್ ಸಮಿತಿ ಮೀನುಗಾರರ ಜಿಲ್ಲಾ ಅಧ್ಯಕ್ಷರಾದ ಗುರುಪ್ಪ ತಿಲಾ೯ಪೂರ ಮಾತನಾಡಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ನೀಡಿ ವಿದ್ಯೆಯ ಜೋತೆಗೆ ವಿನಯತೆ ಕಲಿಸಿರಿ ಎಂದರು. ಸಮಾಜದ ಮಹಿಳಾ ಅಧ್ಯಕ್ಷರಾದ ಶ್ರೀಮತಿ ಸುಜಾತ ಗುಡಿಸಾಗರ ಮಾತನಾಡಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯಲ್ಲಿ ತಾಯಿಂದರ ಪಾತ್ರ ಬಹು ಮುಖ್ಯವಾಗಿದೆ ಮಕ್ಕಳ ಚಲನ ವಲನಗಳ ಬಗ್ಗೆ ಪಾಲಕರು ನಿಗಾವಹಿಸಿರಿ ಎಂದರು.ಸವ೯ರನ್ನು ಮಂಜುನಾಥ ಜಕ್ಕಲಿ ಗುರುಗಳು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಸಭೆಯ ಅಧ್ಯಕ್ಷತೆಯನ್ನು ಗ್ರಾಮದ ಸಮಾಜ ಘಟಕ ಅಧ್ಯಕ್ಷ ರಾದ ವಿಜಯ ಬಾರಕೇರ ವಹಿಸಿದ್ದರು .ಉಪಾಧ್ಯಕ್ಷ ಬೂದೇಶ ಹೊಂಬಳ, ಕಾಯ೯ದಶಿ೯ ಯಲ್ಲಪ್ಪ ಬಾರಕೇರ ,ಖಜಾಂಚಿ ರಂಗಪ್ಪ ಮದ್ದಿನ, ಪ್ರಭು ಬಾರಕೇರ ಸಮಾಜದ ಗುರು ಹಿರಿಯರು ಹಾಗೂ ಮಹಿಳೆಯರು ,ಯುವಕರು ವಿದ್ಯಾರ್ಥಿಗಳು ಸಕ್ರೀಯವಾಗಿ ಪಾಲ್ಗೊಂಡಿದ್ದರು