

ರಾಯಚೂರು ಜಿಲ್ಲೆಯ ೧೨ ಉಪ ವಿಭಾಗದ ೭೪೮ ಗ್ಯಾಂಗಮನ್ ಕಾರ್ಮಿಕರ ಬಾಕಿ ವೇತನ ಪಾವತಿ ಸೇರಿದಂತೆ ದಿನಕ್ಕೆ ಎಂಟು ಗಂಟೆ ಕೆಲಸ ವಾರದ ಹಾಗೂ ರಾಷ್ಟ್ರೀಯ ರಜೆಗಳು ಹಾಗೂ ನೀರಾವರಿ ಇಲಾಖೆಯ ಸಿರವಾರ ವಿಭಾಗದ ಇಇ ವಿಜಯಲಕ್ಷ್ಮಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಂಗಳವಾರ ತುಂಗಭದ್ರಾ ನೀರಾವರಿ ವಲಯ ಹಂಗಾಮಿ ಕಾರ್ಮಿಕರ ಸಂಘದಿAದ ತಾಲೂಕಿನ ಸಾಥ್‌ಮೈಲ್ ಕ್ರಾಸ್ ಬಳಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು.
ಜಿಲ್ಲೆಯ ಎಡದಂಡೆ ಕಾಲುವೆ ವ್ಯಾಪ್ತಿಯ ಯರಮರಸ್, ಸಿಂಧನೂರು, ಸಿರವಾರ ವಿಭಾಗಗಳ ಒಟ್ಟು ೭೪೮ ನೀರು ಸರಬರಾಜು/ ಗ್ಯಾಂಗ್ ಮ್ಯಾನ್ ಕಾರ್ಮಿಕರ ಕಳೆದ ಐದು ತಿಂಗಳ ಸಂಬಳವನ್ನು ಪಾವತಿ ಮಾಡದೆ ಕಾರ್ಮಿಕ ವಿರೋಽ ಕಾನೂನು ವಿರೋಽ ಸರ್ಕಾರದ ನಡತೆಯಿಂದಾಗಿ, ದುಡಿದ ಕೂಲಿ ಕೇಳಿದರೆ ಸಿರವಾರ ವಿಭಾಗದ ಇಇ ವಿಜಯಲಕ್ಷ್ಮೀ ಅವರು ದರ್ಪದ ಮಾತಾಡಿ, ತುಂಗಭದ್ರ ಕಾರ್ಮಿಕರನ್ನು ಮತ್ತು ಅವರ ಸಂಕಷ್ಟಕರವಾದ ಜೀವನವನ್ನು ಅಪಹಾಸ್ಯ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪ್ರತಿ ತಿಂಗಳು ಸಂಬಳ ಪಾವತಿ ಮಾಡುವಂತೆ ಈಗಾಗಲೇ ಯರಮರಸ್, ಸಿಂಧನೂರು ಹಾಗೂ ಸಿರವಾರ ವಿಭಾಗೀಯ ಕಚೇರಿಗಳ ಮುಂದೆ ಹಲವಾರು ಬಾರಿ ಧರಣಿ ನಡೆಸಲಾಗಿದೆ. ಹಾಗೆಯೇ ಸಂಬAಧಪಟ್ಟ ಕಾರ್ಯ ಪಾಲಕ ಅಭಿಯಂತರೊAದಿಗೆ ಆನೇಕ ಸುತ್ತಿನ ಮಾತುಕತೆ ನಡೆಸಲಾಗಿದೆ. ಆದರೆ ನೀರಾವರಿ ಇಲಾಖೆಯಲ್ಲಿ ಕಾರ್ಮಿಕರ ಮಾತಿಗೆ ಕವಡೆ ಕಿಮ್ಮತ್ತು ಇಲ್ಲದಂತಾಗಿದೆ. ಕಾರ್ಮಿಕರು ದುಡಿದ ಹಣವನ್ನು ಕೈಮುಗಿದು ಕೇಳಿದರೆ ನೀವು ನಮಗೆ ಸಂಬAಧವಿಲ್ಲ ನಮ್ಮಲ್ಲಿ ಸಂಬಳ ಕೇಳಬೇಡಿ ನಮ್ಮನ್ನು ಸಂಬಳ ಕೇಳಿದರೆ ಕೆಲಸದಿಂದ ತೆಗೆದುಹಾಕುತ್ತೇವೆ ನೀವು ಯಾರು ಎಂಬುದೇ ನಮಗೆ ಗೊತ್ತಿಲ್ಲ ಸರ್ಕಾರ ನಿಮಗೆ ಸಂಬಳ ಬಿಡುಗಡೆ ಮಾಡಿಲ್ಲ, ಜಾಸ್ತಿ ಮಾತಾಡಿದ್ರೆ ಕೆಲಸದಿಂದ ತೆಗೆದುಹಾಕುತ್ತೇನೆ ಎಂದು ಹೇಳುವುದರ ಮೂಲಕ ಕಾರ್ಮಿಕರಿಗೆ ಹಾಗೂ ಕಾನೂನಿಗೆ ದೊಡ್ಡ ಪ್ರಮಾಣದ ಅಪಮಾನ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಸ್ಥಳಕ್ಕೆ ರಾಯಚೂರು ತಹಸೀಲ್ದಾರ್ ಸುರೇಶ ವರ್ಮಾ ಭೇಟಿ ನೀಡಿ, ಹೋರಾಟಗಾರರಿಂದ ಮನವಿಪತ್ರವನ್ನು ಸ್ವೀಕರಿಸಿ ಮೇಲಾಽಕಾರಿಗಳೊಂದಿಗೆ ಈ ಬಗ್ಗೆ ಚರ್ಚಿಸಿ ಸಮಸ್ಯೆಯನ್ನು ಗಮನಕ್ಕೆ ತರಲಾಗುವುದು. ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬಾಕ್ಸ್ ಮಾಡಿ
ತುಂಗಭದ್ರಾ ನೀರಾವರಿ ವಲಯ ಹಂಗಾಮಿ ಕಾರ್ಮಿಕರ ಸಂಘದಿAದ ಹೆದ್ದಾರಿ ತಡೆ ಪ್ರತಿಭಟನೆ ಹಿನ್ನೆಲೆಯಲ್ಲಿ ನಗರದಿಂದ ಸಿರವಾರ ಹಾಗೂ ಸಿಂಧನೂರು ಮಾರ್ಗವಾಗಿ ಹೋಗುವ ಬಸ್‌ಗಳು ನಗರದ ಬೈಪಾಸ್ ರಸ್ತೆಯಲ್ಲಿಯೇ ನಿಲ್ಲುವಂತಾಯಿತು. ಸಿರವಾರದಿಂದ ಹಾಗೂ ಮಾನ್ವಿ, ಸಿಂಧನೂರು ಕಡೆಯಿಂದ ರಾಯಚೂರಿಗೆ ಆಗಮಿಸಬೇಕಿದ್ದ ಬಸ್‌ಗಳು ಸಾಥ್‌ಮೈಲ್ ಕ್ರಾಸ್ ಬಳಿಯೇ ನಿಂತಿದ್ದರಿAದ ಪ್ರಯಾಣಿಕರು ಬಿರುಬಿಸಿಲಿನಲ್ಲಿ ನಡೆದುಕೊಂಡೆ ರಾಯಚೂರಿನತ್ತ ಬರುತ್ತಿರುವುದು ಕಂಡುಬAದಿತು. ಕೆಲವರು ಸಿಕ್ಕ ದ್ವಿಚಕ್ರ ವಾಹನಗಳನ್ನು ಹತ್ತಿ ರಾಯಚೂರಿನತ್ತ ಬರುವಂತಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಆರ್.ಮಾನಸಯ್ಯ, ರಾಜ್ಯ ಉಪಾಧ್ಯಕ್ಷ ಎಂ.ಗAಗಾಧರ, ಜಿಲ್ಲಾಧ್ಯಕ್ಷ ಜಿ.ಅಮರೇಶ, ಪ್ರಧಾನ ಕಾರ್ಯದರ್ಶಿ ಜಿ.ಅಡವಿರಾವ್, ಪ್ರಮುಖರಾದ ಬಸವರಾಜ, ರಾಮಣ್ಣ ಪೋತ್ನಾಳ,
ರುಕ್ಕಪ್ಪ, ಶರಣಪ್ಪಗೌಡ, ಅಮರೇಗೌಡ, ಉಮೇಶಗೌಡ ಸೇರಿದಂತೆ ವಿವಿಧ ವಿಭಾಗಗಳ ಗ್ಯಾಂಗ್‌ಮ್ಯಾನ್‌ಗಳು, ಕಾರ್ಮಿಕರು ಇದ್ದರು.