

ಮುನವಳ್ಳಿ: ಪಟ್ಟಣದ ಜೆ.ಎಸ್.ಪಿ. ಸಂದ ಅಜ್ಜಪ್ಪ ಗಡಮಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿ ಗಂಗಾಧರ ಕುರಬಗಟ್ಟಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಟಕ ಬೆಂಗಳೂರು ಅವರ 2022&23ನೇ ಸಾಲಿನ ಅತ್ಯುತ್ತಮ ರಾಜ್ಯ ಎನ್ಎಸ್ಎಸ್ ಸ್ವಯಂಸೇವಕ ಪ್ರಶಸ್ತಿ ಲಭಿಸಿದೆ. ಮಾ.17ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.