ಗಂಗಾಧರ ಶ್ರೀಗಳ ಆರೋಗ್ಯ ವಿಚಾರಿಸಿದ ಶ್ರೀಶೈಲ ಜಗದ್ಗುರುಗಳು

shrishail jagadguru
Published on

ಯಾದಗಿರಿ: ಒಂದು ತಿಂಗಳಿನಿಂದ ಅನಾರೋಗ್ಯದಿಂದ ನಗರದ ಶರಣಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯಲ್ಹೇರಿ ವಾರಣಾಸಿ ಹಿರೇಮಠದ ಪೀಠಾಧಿಪತಿ ಶ್ರೀ ಗಂಗಾಧರ ಶಿವಾಚಾರ್ಯರನ್ನು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯರು ಬೇಟಿಯಾಗಿ ಆರೋಗ್ಯ ವಿಚಾರಿಸಿದರು.

ಜಗದ್ಗುರುಗಳು ಆಸ್ಪತ್ರೆಯ ವೈದ್ಯ ಡಾ.ಶರಣಬಸವ ಯಲ್ಹೇರಿ ಅವರೊಂದಿಗೆ ಗಂಗಾಧರ ಶ್ರೀಗಳ ಆರೋಗ್ಯ ಕುರಿತು ಚರ್ಚಿ ಸಿ ಉತ್ತಮ ಚಿಕಿತ್ಸೆ ನೀಡಿ ಎಂದು ಹೇಳಿದರು.

ನೀವು ಕಲ್ಯಾಣ ಕರ್ನಾಟಕದ ಸ್ವಾಮೀಜಿಗಳಲ್ಲಿ ಹಿರಿಯರು, ತ್ರಿಕಾಲ ಪೂಜಾ ಹಾಗೂ ವೀರಶೈವ ಧರ್ಮವನ್ನು ಉಳಿಸಿ ಬೆಳೆಸುವಲ್ಲಿ ನಿಮ್ಮ ಶ್ರಮ ಅಗಾದವಾಗಿದೆ. ಈ ವಯಸ್ಸಿನಲ್ಲಿ ಕೂಡ ಕಲ್ಪ ಬಸ್ಮವನ್ನು ಸಿದ್ದಪಡಿಸಿ ಭಕ್ತರಿಗೆ ನೀಡುವ ಮೂಲಕ ಅವರ ಸಮಸ್ಯೆಗಳನ್ನು ಪರಿಹಾರ ಮಾಡಿದ್ದೀರಿ, ಯಾವುದಕ್ಕೂ ಆತ್ಮ ವಿಶ್ವಾಸ ಕಳೆದುಕೊಳ್ಳಬೇಡಿ ಆದಷ್ಟು ಬೇಗನೆ ನಿಮ್ಮ ಆರೋಗ್ಯ ಸುಧಾರಿಸಲಿ ನಿಮ್ಮ ಸಲಹೆ ಸೂಚನೆ ಕಿರಿಯ ಸ್ವಾಮೀಜಿಗಳಿಗೆ ಅವಶ್ಯಕವಾಗಿದೆ ಎಂದು ಹೇಳಿದರು.

ಶಹಾಪುರದ ಶ್ರೀ ಸೂಗುರೇಶ್ವರ ಶಿವಾಚಾರ್ಯರು, ಶ್ರೀ ಶಿವಯೋಗಿ ಶಿವಾಚಾರ್ಯರು ತಂಗಡಪಲ್ಲಿ, ಶ್ರೀ ಕೊಟ್ಟುರೇಶ್ವರ ಶಿವಾಚಾರ್ಯರು ಯಲ್ಹೇರಿ, ಶ್ರೀ ಶಾಂತ ಮಲ್ಲಿಕಾಜರ್ುನ ಪಂಡಿತಾರಾಧ್ಯ ಶಿವಾಚಾರ್ಯರು ಹೆಡಗಿಮದ್ರಿ, ಡಾ. ವೀರಭದ್ರಪ್ಪ ಯಲ್ಹೇರಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net