

ಯಾದಗಿರಿ: ನಗರೀಕರಣದ ಪ್ರಭಾವದಿಂದಾಗಿ ಇಂದು ಮನುಷ್ಯನ ಜೀವನ ಒಂದು ರೀತಿಯಿಂದ ಯಾಂತ್ರಿಕಮಯವಾಗುತ್ತಿದೆ ಎಂದು ಅಬ್ಬೆತುಮಕೂರಿನ ಡಾ. ಗಂಗಾಧರ ಶ್ರೀಗಳು ನುಡಿದರು.
ಸೋಮವಾರ ಇಲ್ಲಿನ ಬಸವೇಶ್ವರ ನಗರದಲ್ಲಿ ನೂತನವಾಗಿ ನಿಮರ್ಾಣ ಮಾಡಲಾದ ಈಶ್ವರ ಹಾಗೂ ಬಸವಣ್ಣ ಮಂದಿರ ಲೋಕಾರ್ಪಣೆ ಹಾಗೂ ಕಳಸಾರೋಹಣ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಧಾಮರ್ಿಕ ಕಾರ್ಯಕ್ರಮಗಳಿಂದ ಸಮಾಜದ ಎಲ್ಲ ವರ್ಗದ ಜನರಲ್ಲಿ ಸಾಮರಸ್ಯ ಮೂಡುತ್ತದೆ. ನಗರದಲ್ಲಿ ಭವ್ಯ ದೇವಾಲಯ ನಿಮರ್ಾಣ ಮಾಡಿರುವುದರಿಂದ ಇಲ್ಲಿ ನಿರಂತರ ಧಾಮರ್ಿಕ ಚಟುವಟಿಕೆಗಳು ನಡೆಯಲಿ ಎಂದರು.
ಮಾಜಿ ಸಚಿವ ಡಾ.ಎ.ಬಿ. ಮಾಲಕರಡ್ಡಿ ಮಾತನಾಡಿ, ನಾವು ಸಮಾಜಮುಖಿ ಕಾರ್ಯಗಳಿಗೆ ಸದಾ ಸಹಾಯ, ಸಹಕಾರ ನೀಡುವುದರಿಂದ ನಮ್ಮ ಬದುಕಿಗೆ ಆಧ್ಯಾತ್ಮಿಕ ಸಂಸ್ಕಾರ ಸಿಗುವ ಜತೆಯಲ್ಲಿ ನೈತಿಕ ಮೌಲ್ಯಗಳು ಬೆಳಸಿಕೊಳ್ಳಬಹುದಾಗಿದೆ ಎಂದು ಹೇಳಿದರು.
ಸೇವಾ ಸಮಿತಿ ಅಧ್ಯಕ್ಷ ರಾಮರೆಡ್ಡಿ ತಂಗಡಗಿ, ಹಲಕಟರ್ಿಯ ಅಭಿನವ ಮುನೀಂದ್ರ ಶಿವಾಚಾರ್ಯರು, ಮುದ್ನೂರ ಕಂಠಿಮಠದ ಸಿದ್ದಮಲ್ಲಿಕಾಜರ್ುನ ಶಿವಾಚಾರ್ಯರು, ರಾಚಯ್ಯ ಸ್ವಾಮಿ ಚನ್ನೂರ, ಮಾಜಿ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ, ಮಹೇಶರೆಡ್ಡಿ ಮುದ್ನಾಳ್, ಚನ್ನಪ್ಪಗೌಡ ಮೋಸಂಬಿ, ಅಮೀನರಡ್ಡಿ ಬಿಳ್ಹಾರ ಹತ್ತಿಕುಣಿ, ಲಕ್ಷ್ಮಣರಾವ್ ಹೆಂದೆ, ಸಿದ್ದಲಿಂಗರೆಡ್ಡಿ ಉಳ್ಳೆಸೂಗುರ, ಮಹಾದೇವಪ್ಪಗೌಡ ಅಬ್ಬೆತುಮಕೂರ, ಸೋಮನಾಥ ಜೈನ್, ಚಂದ್ರಾಯಗೌಡ ದೇವಣಗಾಂವ ಗೋಗಿ, ಶರಣಗೌಡ ಕಾಳೆಬೆಳಗುಂದಿ, ರವಿ ಬಾಪೂರೆ, ಡಾ. ಶಿವಪುತ್ರರಡ್ಡಿ ಚಟ್ನಳ್ಳಿ, ಡಾ.ಸಿದ್ದರಾಜ ರಡ್ಡಿ, ಇದ್ದರು.