

ವಿಜಯವಾಣಿ ಸುದ್ದಿಜಾಲ ವಿಜಯಪುರ
ಇಲ್ಲಿನ ಗ್ರಾಮದೇವತೆ ಶ್ರೀ ಗಂಗಾದೇವಿ ಅಮ್ಮನವರ 54ನೇ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.
ಮಹಿಳೆಯರು ದೀಪಾರತಿಗಳನ್ನು ಬೆಳಗುವುದರ ಮೂಲಕ ದೇವಿಯ ದರ್ಶನ ಪಡೆದರು.
ಜಾತ್ರಾ ಮಹೋತ್ಸವದ ಪ್ರಯುಕ್ತ ಜೂನಿಯರ್ ಶಂಕರ್‌ನಾಗ್ ಹಾಗೂ ಜೂನಿಯರ್ ವಿಷ್ಣುವರ್ಧನ್ ಅವರೊಂದಿಗೆ ರಸ ಸಂಜೆ ಕಾರ್ಯಕ್ರಮ ನಡೆಯಿತು. ಬಸ್ ನಿಲ್ದಾಣದಲ್ಲಿ ಸತ್ಯಮ್ಮದೇವಿ ಭಕ್ತ ಮಂಡಳಿಯಿಂದ ಆರ್ಕೆಸ್ಟ್ರಾ ನಡೆಯಿತು.
ಪಾನಕ ಪೂಜಾ ಮಹೋತ್ಸವ, ವಿಶೇಷ ಹೂವಿನ ಅಲಂಕಾರ, ಸಹಸ್ರನಾಮಾರ್ಚನೆ,ಅನ್ನಸಂತರ್ಪಣೆ ನಡೆಯಿತು.
ಜಾತ್ರೆಯಲ್ಲಿ ಹಲಗೆ ಬಡಿಯುವವರು ನಡೆಸಿಕೊಟ್ಟ ಕಾರ್ಯಕ್ರಮ ಎಲ್ಲರ ಗಮನ ಸೆಳೆದಿದ್ದು, ಗಾರುಡಿ ಗೊಂಬೆಯ ಕುಣಿತ, ಹುಲಿವೇಷ ಆಕರ್ಷಣೀಯವಾಗಿತ್ತು. ಊರಿನ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ, ಗಾನವೃಂದದವರಿಂದ ಭಕ್ತಿಗೀತೆ, ಭಾವಗೀತೆಗಳ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ಪುರಸಭೆ ಮಾಜಿ ಅಧ್ಯಕ್ಷ ಎಂ.ಸತೀಶ್ ಕುಮಾರ್, ಕೆಪಿಸಿಸಿ ಕಾರ್ಯದರ್ಶಿ ವಿ.ಮಂಜುನಾಥ್, ಕಸಾಪ ಜಿಲ್ಲಾಧ್ಯಕ್ಷ ಚಿ.ಮಾ.ಸುಧಾಕರ್, ಗಂಗಾಮತಸ್ಥರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ಉಪಾಧ್ಯಕ್ಷ ಶಿವರಾಜ್, ಜಾತ್ರಾ ಕಮಿಟಿ ಗೌರವ ಕಾರ್ಯದರ್ಶಿ ರುದ್ರಮೂರ್ತಿ, ಪುರಸಭಾ ಮಾಜಿ ಉಪಾಧ್ಯಕ್ಷ ಎಂ.ಕೇಶವಪ್ಪ, ಪುರಸಭೆ ಸದಸ್ಯರಾದ ಕವಿತಾ ಮುನಿಆಂಜಿನಪ್ಪ, ಸಿ.ಎಂ.ರಾಮು, ಗಂಗಾಮತಸ್ಥರ ರಾಜ್ಯ ಸಂಘಟನಾ ಕಾರ್ಯದರ್ಶಿಯಾದ ಎನ್.ಮುನಿರಾಜು, ಪುರಸಭೆ ಮಾಜಿ ಅಧ್ಯಕ್ಷ ಅನ್ನಪೂರ್ಣಮ್ಮ, ಮಾಜಿ ಪುರಸಭೆ ಸದಸ್ಯರಾದ ಡಿ.ನವೀನ್ ಕುಮಾರ್, ಕೆ.ಬಿ.ಎಸ್.ಭಾಸ್ಕರ್, ಲಕ್ಷ್ಮೀಬಾರ್ ಸಂಪತ್ ಕುಮಾರ್, ಗಂಗಾಮತಸ್ಥರ ಸಂಘದ ಗೌರವಾಧ್ಯಕ್ಷ ಮೋಹನ್ ಬಾಬು ಇದ್ದರು.