ರಾಮನಾಯಕನ ಕೆರೆಯಲ್ಲಿ ಗಂಗಾರತಿ

31_10_2025_BGR_RURAL_PAGE_5
ಹೊಸೂರಿನಲ್ಲಿರುವ ರಾಮನಾಯಕನ ಕೆರೆಯಲ್ಲಿ ಅಖಿಲ ಭಾರತ ಸನ್ಯಾಸಿಗಳ ಸಂದ ವತಿಯಿಂದ ಗಂಗಾರತಿ ನೆರವೇರಿಸಲಾಯಿತು.
Published on

ಹೊಸೂರು : ಹೊಸೂರಿನಲ್ಲಿರುವ ರಾಮನಾಯಕನ ಕೆರೆಯಲ್ಲಿ ಗಂಗಾರತಿ ಅದ್ದೂರಿಯಾಗಿ ನೆರವೇರಿತು. ಅಖಿಲ ಭಾರತ ಸನ್ಯಾಸಿಗಳ ಸಂದ ವತಿಯಿಂದ ಪ್ರತಿ ವರ್ಷ ನಗರದಲ್ಲಿರುವ ರಾಮನಾಯಕನ ಕೆರೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಅದರಂತೆ ಈ ಬಾರಿಯೂ ಗಂಗೆ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ವಿಶೇಷ ದೀಪಗಳಿಂದ ಆರತಿ ಬೆಳಗಲಾಯಿತು. ಕಳೆದ ಐದು ವರ್ಷಗಳಿಂದ ಆರತಿ ಕಾರ್ಯಕ್ರಮ ನಡೆಸಲಾಗುತ್ತದೆ. ಕರ್ನಾಟಕದ ಕೊಡಗು ಜಿಲ್ಲೆಯ ಕಾವೇರಿಯ ಉಗಮಸ್ಥಳ ತಲಕಾವೇರಿಯಿಂದ ಆರಂಭಗೊಂಡ ಗಂಗಾರತಿ ರಥಯಾತ್ರೆ, ಕಾವೇರಿ ನದಿ ಹರಿಯುವ ಪ್ರಮುಖ ಪ್ರದೇಶಗಳಲ್ಲಿ ಸಾಗಿ ಕಾವೇರಿ ನದಿ ನೀರು ಸಮುದ್ರ ಸೇರುವ ತಮಿಳುನಾಡಿನ ಪೂಂಬುಕಾರ ಸಮೀಪದಲ್ಲಿ ಸಮಾಪ್ತಿಯಾಗಲಿದೆ.

ಇದೇ ವೇಳೆ ಅಖಿಲ ಭಾರತ ಸನ್ಯಾಸಿಗಳ ಸಂದಿಂದ ನದಿಗಳನ್ನು ಸ್ವಚ್ಛಗೊಳಿಸುವ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು. ಅಖಿಲ ಭಾರತ ಸನ್ಯಾಸಿಗಳ ಸಂದ ಅಧ್ಯ ಡಾ. ಷಣ್ಮುಗವೇಲು, ಉಪಾಧ್ಯರಾದ ಸ್ವಾಮಿ ರಮಾನಂದ, ವೈ.ವಿ.ಎಸ್​. ರೆಡ್ಡಿ, ಬ್ರಾಹ್ಮಣರ ಸಂದ ಅಧ್ಯೆ ಸುಧಾ ನಾಗರಾಜನ್​, ಭಾರತೀಯ ಜನತಾ ಪದ ಶಿಣ ಸಮಿತಿ ಅಧ್ಯ ಲಕ್ಷಿ$್ಮಪತಿ, ಕರುಣಾನಿಧಿ ಭಾಗ್ಯರಾಜ್​, ಹಿಂದು ಮುನ್ನಡೆಸಿ ಸಂದ ಜಿಲ್ಲಾಧ್ಯ ವಿಷ್ಣುಕುಮಾರ್​ ಕಿರಣ್​ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net