

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡುವ ಇಲ್ಲಿನ ಸುಪ್ರಸಿದ್ಧ ನುಚ್ಚಂಬಲಿ ಬಾವಿಗೆ ಪಾಲಿಕೆ ಮೇಯರ್ ಜ್ಯೋತಿ ಪಾಟೀಲ ಶುಕ್ರವಾರ ಗಂಗಾಪೂಜೆ ನೆರವೇರಿಸಿದರು.
ಈ ವೇಳೆ ಮೇಯರ್ ಜ್ಯೋತಿ ಪಾಟೀಲ ಮಾತನಾಡಿ, ನಗರದ ಪುರಾತನ ಭಾವಿಯ ಸ್ವಚ್ಛತೆ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ಐತಿಹಾಸಿಕ ಬಾವಿಯಲ್ಲಿ ಸಾರ್ವಜನಿಕ ಮತ್ತು ಮನೆಯಲ್ಲಿ ಪ್ರತಿಷ್ಠಾಪಿಸಿದ ಮೂರ್ತಿಗಳನ್ನು ವಿಸರ್ಜನೆ ಮಾಡುವುದು ವೈಶಿಷ್ಟ÷್ಯತೆಯಿಂದ ಕೂಡಿದೆ. ಸ್ವಚ್ಛಗೆ ಮತ್ತು ಶಾಂತತೆ ಕಾಪಾಡಿ ಮಾದರಿಯಾಗಬೇಕು ಎಂದರು.
ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಮುಖಂಡರಾದ ಶಂಕರ ಶೇಳಕೆ, ರಾಕೇಶ ನಾಝರೆ, ಶಂಭುಗೌಡ ಸಾಲಮನಿ, ರತ್ನಾ ನಾಝರೆ, ನಾಗರಾಜ ಹಳಕಟ್ಟಿ, ಮೋಹನ ರಾಮದುರ್ಗ, ಬಸವರಾಜ ಬಾಳಗಿ, ಪುನೀತ ರಾಮನಗೌಡರ, ವಿನಾಯಕ ಕನವಳ್ಳಿ, ತಾನಾಜಿ ರೋಕಡೆ, ಸಂತೋಷ ತಿಗಡಿ, ಹನುಮಮತ ಕಾಳೆ, ಭಾರತಿ ದಳವಾಯಿ, ಶಾಂತಾ ಪವಾರ, ಇತರರಿದ್ದರು.