

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಸಾರ್ವಜನಿಕ ಗಣೇಶ ವಿಸರ್ಜನೆ ಹಿನ್ನೆಲೆಯಲ್ಲಿ ಇಲ್ಲಿನ ನುಚ್ಚಂಬ್ಲಿ ಬಾವಿಯ ಗಂಗಾ ಪೂಜೆಯನ್ನು ಭಾನುವಾರ ನೆರವೇರಿಸಲಾಯಿತು.
ಮೇಯರ್ ರಾಮಪ್ಪ ಬಡಿಗೇರ, ಪಾಲಿಕೆ ಸದಸ್ಯ ಈರೇಶ ಅಂಚಟಗೇರಿ ಪೂಜೆ ನೆರವೇರಿಸಿದರು. ನಗರದ ಸಾರ್ವಜನಿಕ ಹಾಗೂ ಮನೆಗಳಲ್ಲಿ ಪ್ರತಿಷ್ಠಾಪಿಸಿದ 200ಕ್ಕೂ ಹೆಚ್ಚು ಗಣೇಶ ಮೂತಿರ್ಗಳನ್ನು ಈ ಭಾವಿಯಲ್ಲಿ ವಿಸರ್ಜನೆ ಮಾಡಲಾಗುತ್ತಿದೆ. ಹೀಗಾಗಿ ಭಾವಿಯಯನ್ನು ಸ್ವಚ್ಛಗೊಳಿಸಿ ಗಂಗಾ ಪೂಜೆ ನೆರವೇರಿಸಿ 5, 7 ಹಾಗೂ 11 ದಿನಗಳ ಗಣಪತಿ ವಿಸರ್ಜನೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ಪಾಲಿಕೆ ಸದಸ್ಯರಾದ ಶಂಕರ ಶೇಳಕೆ, ಶಂಭುಗೌಡ ಸಾಲಮನಿ, ರತ್ನಾಬಾಯಿ ನಾಝರೆ, ಮುಖಂಡರಾದ ಪುಷ್ಪ ನವಲಗುಂದ, ತಾನಾಜಿ ರೋಖಡೆ, ಸುಮಿತ್ರಾ ಬಡಿಗೇರ, ರಾಕೇಶ ನಾಝರೆ, ಸ್ಥಳಿಯರು, ಇತರರು ಇದ್ದರು.