ನಾಳೆಯಿಂದ ಗಂಗಾಮಾಳಿಕಾ ದೇವಿ ಜಾತ್ರೆ

HSN07ASK-P01
Published on

ಅರಸೀಕೆರೆ: ತಾಲೂಕಿನ ಅಮ್ಮನಹಟ್ಟಿ ಗ್ರಾಮದ ಶ್ರೀ ಗಂಗಾಮಾಳಿಕಾ ದೇವಿ ಜಾತ್ರಾ ಮಹೋತ್ಸವ ಏ.9 ಮತ್ತು 10 ರಂದು ಜರುಗಲಿದೆ ಎಂದು ದೇವಸ್ಥಾನದ ಸಮಿತಿ ತಿಳಿಸಿದೆ.

ಜಾತ್ರಾ ಮಹೋತ್ಸವವು ಚಿತ್ರದುರ್ಗದ ಶ್ರೀ ಕೃಷ್ಣಯಾದವನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ಜರುಗಲಿದ್ದು, ಏ.9ರಂದು ಬೆಳಗ್ಗೆ 11.30ಕ್ಕೆ ಕಳಸ ಕನ್ನಡಿ ನಡೆಮುಡಿಯೊಂದಿಗೆ ಗಂಗಾಸ್ನಾನಕ್ಕೆ ಸಿಂಗನಕೆರೆ ಪ್ರವೇಶ, ನಂತರ ಪೂಜಾ ಕೈಕಂರ್ಯಗಳು ನೆರವೇರಲಿವೆ. ರಾತ್ರಿ 9.30 ಕ್ಕೆ ಊರಿನ ಹೆಬ್ಬಾಗಿಲಿನಲ್ಲಿ ಓಕುಳಿ ಸೇವೆ, ಗ್ರಾಮ ಪ್ರವೇಶ, ರಾತ್ರಿ 12ಕ್ಕೆ ಹೂವಿನ ಮಂಟಪ ಸೇವೆ ನೆರವೇರಿಸಲಾಗುವುದು. 10 ರಂದು ಮುಂಜಾನೆ 5 ಗಂಟೆಗೆ ಬೇಟೆ ಮಣೇವು, 12ಕ್ಕೆ ಉತ್ಸವದೊಂದಿಗೆ ದೇವಾಲಯ ಪ್ರವೇಶ, ಸಂಜೆ 7ಕ್ಕೆ ಮಹಾಮಂಗಳಾರತಿ, ದೀಪೋತ್ಸವ ಹಾಗೂ ದುಗ್ಗಳ ಸೇವೆ ನಂತರ ಪರವು ಏರ್ಪಡಿಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net