ಸಾಹಿತಿ ಕೆ. ಕಲ್ಯಾಣ ಕೌಟುಂಬಿಕ ಕಲಹಕ್ಕೆ ಕಾರಣರಾಗಿದ್ದ ಗಂಗಾ ಕುಲಕರ್ಣಿ ಆತ್ಮಹತ್ಯೆಗೆ ಶರಣು!

Ganga Kulakarni
Published on

ಕೊಪ್ಪಳ: ಚಿತ್ರ ಸಾಹಿತಿ ಕೆ.ಕಲ್ಯಾಣ ಕೌಟುಂಬಿಕ ಕಲಹಕ್ಕೆ ಕಾರಣರಾಗಿದ್ದ ಜ್ಯೋತಿ ಕುಲಕರ್ಣಿ ಅಲಿಯಾಸ್​ ಗಂಗಾ ಕುಲಕರ್ಣಿ ವಿಷ ಸೇವಿಸಿ ಕುಷ್ಟಗಿ ನ್ಯಾಯಾಲಯ ಆವರಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕುಷ್ಟಗಿ ತಾಲೂಕಿನ ಕ್ಯಾದಿಗುಪ್ಪಾ ಗ್ರಾಮಸ್ಥರೊಬ್ಬರಿಂದ ಹಣ ಪಡೆದು ವಂಚಿಸಿದ ಪ್ರಕಣದ ವಿಚಾರಣೆ ಎದುರಿಸುತ್ತಿದ್ದರು. 2017ರಿಂದ ಪ್ರಕರಣ ನಡೆಯುತ್ತಿದ್ದು, ನ.3 ರಂದು ವಿಚಾರಣೆ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ತಮ್ಮ ಪರ ವಕೀಲರನ್ನು ಭೇಟಿ ಮಾಡಲು ಬಂದಿದ್ದರು. ನ್ಯಾಯಾಲಯದಲ್ಲಿ ವಕೀಲರನ್ನು ಭೇಟಿ ಮಾಡುವಾಗಲೇ ತೀವ್ರ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದಾರೆ‌. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಮಾರ್ಗಮಧ್ಯದಲ್ಲೇ ಸಾವಿಗೀಡಾಗಿದ್ದಾರೆ. ನ್ಯಾಯಾಲಯಕ್ಕೆ ಬರುವ ಮುನ್ನವೇ ವಿಷ ಸೇವಿಸಿ ಬಂದಿದ್ದರು ಎನ್ನಲಾಗಿದೆ‌.

ಕಲ್ಯಾಣ್​ ಕುಟುಂಬದ ಸಮಸ್ಯೆಗೆ ಮೂಲ ಕಾರಣ

ಕಲ್ಯಾಣ್ ಅವರ ಪತ್ನಿ, ಅತ್ತೆ ಮತ್ತು ಮಾವನ ಹೆಸರಿನಲ್ಲಿ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಇದೆ ಎಂಬುದು ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಗಂಗಾ ಕುಲಕರ್ಣಿಗೆ ಮತ್ತು ಮಂತ್ರವಾದಿ ಶಿವಾನಂದ ವಾಲಿಗೆ ಮೊದಲೇ ಗೊತ್ತಿತ್ತು. ಆಸ್ತಿಯನ್ನು ಕಬಳಿಸುವ ಉದ್ದೇಶದಿಂದಲೇ ಅವರಿಬ್ಬರೂ ಸಂಚು ರೂಪಿಸಿದ್ದರು.

ಅದರ ಮೊದಲ ಹಂತವಾಗಿಯೇ ಕೆ. ಕಲ್ಯಾಣ್ ಅವರ ಮನೆಗೆ ಗಂಗಾ ಕುಲಕರ್ಣಿ ಮನೆ ಕೆಲಸಕ್ಕೆ ಸೇರಿಕೊಂಡಿದ್ದಳು. ಕ್ರಮೇಣ ಕುಟುಂಬದಲ್ಲಿ ಕಲಹ ಉಂಟಾಗುವಂತೆ ಹುನ್ನಾರ ಮಾಡಿದ್ದಳು. ಈ ವೇಳೆ ಹೋಮ, ಹವನ, ಮಾಟ, ಮಂತ್ರದ ಹೆಸರಿನಲ್ಲಿ ವಾಲಿಯನ್ನು ಕಲ್ಯಾಣ್ ಅವರ ಪತ್ನಿ, ಅತ್ತೆ ಮತ್ತು ಮಾವನಿಗೆ ಪರಿಚಯಿಸಿದ್ದಳು. ಈ ವೇಳೆ ಕಲ್ಯಾಣ್ ಕುಟುಂಬದ ಬ್ಯಾಂಕ್ ಖಾತೆಗಳಿಂದ ಪ್ರತಿ ಪೂಜೆಗೆ 2.5 ರಿಂದ 3 ಲಕ್ಷ ರೂ. ಹಣವನ್ನು ಇಬ್ಬರೂ ಸೇರಿ ಪೀಕಿದ್ದರು. ಮಂತ್ರವಾದಿ ವಾಲಿ ತನ್ನ ಬ್ಯಾಂಕ್ ಖಾತೆಗೆ ಆ ಹಣವನ್ನು ವರ್ಗಾಯಿಸಿಕೊಂಡಿದ್ದ. ಇದನ್ನು ಆತನೇ ವಿಚಾರಣೆ ವೇಳೆ ಒಪ್ಪಿಕೊಂಡಿದ್ದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net