

ಕಡೂರು: ಈ ಹಿಂದೆ ಅಂಬೇಡ್ಕರ್ ನಿಗಮದಿಂದ ಮಾತ್ರ ಗಂಗಾಕಲ್ಯಾಣ ಯೋಜನೆ
ಜಾರಿಯಲ್ಲಿತ್ತು. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಎಲ್ಲ ನಿಗಮಗಳ ಅಡಿ ಬರುವ ಜಾತಿ
ವರ್ಗಗಳ ರೈತರನ್ನು ಗಂಗಾಕಲ್ಯಾಣ ಯೋಜನೆಗೆ ಸೇರಿಸಲು ಸದನದಲ್ಲಿ ಮನವಿ
ಮಾಡಿದ್ದರಿಂದ ಬಹುತೇಕ ನಿಗಮಗಳು ಈ ಯೋಜನೆಯನ್ನು ಜಾರಿಗೊಳಿಸಿವೆ ಎಂದು ಶಾಸಕ
ಕೆ.ಎಸ್.ಆನಂದ್ ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ತಾಲೂಕು ಘಟಕದಿಂದ ಗಂಗಾಕಲ್ಯಾಣ
ಯೋಜನೆಯಡಿ ಪರಿಶಿಷ್ಟ ಜಾತಿಯ 45 ಫಲಾನುಭವಿಗಳಿಗೆ ಸಲಕರಣೆ, ಮೋಟರ್,
ಪೈಪ್‌ಗಳನ್ನು ಸೋಮವಾರ ವಿತರಿಸಿ ಮಾತನಾಡಿ, ಇದೀಗ ಅಂಬೇಡ್ಕರ್,ಆದಿ ಜಾಂಬವ,
ಭೋವಿ ನಿಗಮಗಳಿಂದ ಸುಮಾರು 45 ಫಲಾನುಭವಿಗಳಿಗೆ ತಲಾ ಒಬ್ಬರಿಗೆ 3.50 ಲಕ್ಷ
ರೂ.ಮೌಲ್ಯದ ಮೋಟರ್,ಪೈಪ್ ಮತ್ತಿತರ ಸಲಕರಣೆಗಳನ್ನು ನೀಡಲಾಗಿದೆ ಅಂದಾಜು 1.57
ಕೋಟಿ ವೆಚ್ಚವಾಗಿದೆ ಎಂದರು.
ಅಂಬೇಡ್ಕರ್ ಅಭಿವೃದ್ಧಿ ನಿಗಮದ ತಾಲೂಕು ಅಧಿಕಾರಿ ತಿಪ್ಪೇಸ್ವಾಮಿ ಮಾತನಾಡಿ, ಕಳೆದ 3
ವರ್ಷಗಳ ಅವಧಿಯ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಸುಮಾರು 45 ಜನರಿಗೆ
ತಲಾ 3.5 ಲಕ್ಷ ರೂ.ಮೌಲ್ಯದ ಪರಿಕರಗಳನ್ನು ಶಾಸಕರು ವಿತರಣೆ ಮಾಡಿದ್ದಾರೆ ಎಂದರು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಪಂಚನಹಳ್ಳಿ ಪ್ರಸನ್ನ, ಬಳ್ಳೆಕೆರೆ ಸಂತೋಷ್,
ಪ್ರಮೋದ್, ಲಕ್ಷಣ್, ತಮ್ಮಯ್ಯ, ಸಚಿನ್ ಇದ್ದರು.