

ನಂದೇಶ್ವರ: ಉತ್ತರ ಭಾರತದ ಗಂಗಾ ಆರತಿ ಮಾದರಿಯಲ್ಲಿ ಹಿಪ್ಪರಗಿ ಗ್ರಾಮದಲ್ಲಿ 2ನೇ ವರ್ಷದ ಕೃಷ್ಣಾ ಆರತಿ ಕಾರ್ಯಕ್ರಮ ಆ.16ರಂದು ಹಮ್ಮಿಕೊಳ್ಳಲಾಗಿದೆ. 200 ನಾಗಾ ಸಾಧುಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ನಿರಾಣಿ ಉದ್ಯಮ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ ಹೇಳಿದರು.
ಸಮೀಪದ ಹಿಪ್ಪರಗಿ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕೃಷ್ಣಾ ಆರತಿ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ನಾಡಿನ ಮಠಾಧೀಶರು, ಸಾಹಿತಿಗಳು, ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಕೃಷ್ಣಾ ನದಿಯಲ್ಲಿ ಪುಣ್ಯ ಸ್ನಾನ, ಕೃಷ್ಣಾ ಆರತಿ, ನೈವೇದ್ಯ ಅರ್ಪಣೆ, ಕೃಷ್ಣಾ ನದಿ ಕುರಿತು ವಿಶೇಷ ಗೋಷ್ಠಿ ಜರುಗಲಿವೆ. ವಿವಿಧ ಸಾಧುಗಳು ವಸತಿ ಹಾಗೂ ಅವರ ದರ್ಶನಕ್ಕೆ ವಿಶೇಷ ವ್ಯವಸ್ಥೆ, ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ.
150ಕ್ಕಿಂತಲೂ ಹೆಚ್ಚು ದೇವರ ಪಲ್ಲಕ್ಕಿ ಆಗಮಿಸುವ ನಿರೀೆ ಇದೆ. ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳಿಂದ ಅಪಾರ ಜನರು ಭಾಗಿಯಾಗಲಿದ್ದಾರೆ. ಸಾಹಿತಿಗಳು, ಕಲಾವಿದರು ಕೃಷ್ಣಾ ನದಿ ಮೇಲೆ ಬೆಳಕು ಚೆಲ್ಲಬೇಕು. ಕಾವೇರಿಗೆ ಕೊಡುವ ಪ್ರಾತಿನಿಧ್ಯವನ್ನು ಕೃಷ್ಣಾ ನದಿಗೂ ಕೊಡಬೇಕೆಂದು ತಿಳಿಸಿದರು.
ಹರ್ಷಾನಂದ ಸ್ವಾಮೀಜಿ, ಸಾಹಿತಿ ಸಿದ್ದರಾಜ ಪೂಜಾರಿ, ಸಾಯಿಪ್ರಿಯಾ ಸಕ್ಕರೆ ಕಾರ್ಖಾನೆ ಕೃಷಿ ವಿಭಾಗದ ಅಧಿಕಾರಿ ಎನ್.ಸಿ. ಚೌಗಲಾ, ಬಸವರಾಜ ದಲಾಲ, ಪುಂಡಲೀಕ ಪಾಲಬಾವಿ, ಮಲ್ಲಪ್ಪ ಹಂಚಿನಾಳ, ಸೋಮನಾಥ ಪಾಟೀಲ, ಶಂಕರ ಕಿತ್ತೂರ, ಗೂಳಪ್ಪ ಶಿವಪೂಜಿ, ಭೀಮಪ್ಪ ಹೊನಗೊಂಡ, ಮಹೇಶ ಮಠದ, ಮಲ್ಲಪ್ಪ ಚವ್ಹಾಣ, ಅಣ್ಣಪ್ಪ ಸಾವಳಗಿ, ಚಿದಾನಂದ ಯಲಾಗೋಣ ಇತರರಿದ್ದರು.