ಗಂಗಾ ಆರತಿ ಮಾದರಿ ಮಹೋತ್ಸವ ಡಿ. 3ಕ್ಕೆ

New Pm
Published on

ಹುಬ್ಬಳ್ಳಿ: ಕಲಬುರ್ಗಿ ಜಿಲ್ಲೆಯ ಅಪ್ಜಲಪುರ ತಾಲೂಕಿನ ದೇವಲ ಗಾಣಗಾಪುರ ಗ್ರಾಮದಲ್ಲಿ ಡಿ. 3ರಂದು ಕಾಶಿ ಮಾದರಿಯ ಗಂಗಾ ಆರತಿ ಮಹೋತ್ಸವ ಹಾಗೂ ಕೋಲಿ-ಅಂಬಿಗರ ಸಮಾಜದ ಬೃಹತ್ ಜನಜಾಗೃತಿ ಅಭಿಯಾನ ಆಯೋಜಿಸಲಾಗಿದೆ.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಜಗದ್ಗುರು ಶ್ರೀ ರಾಜು ಗುರುಸ್ವಾಮೀಜಿ, ಕೋಲಿ ಸಮಾಜದ ಏಳಿಗೆಗಾಗಿ ಶ್ರಮಿಸಿದ ಮಾಜಿ ಮುಖ್ಯ ಸಚೇತಕರಾದ ವಿಠ್ಠಲ ಟಿ. ಹೇರೂರ ಅವರ 11ನೇ ವರ್ಷದ ಪುಣ್ಯಸ್ಮರಣೆ ಬೃಹತ್ ಜನಜಾಗೃತಿ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ರಾಜ್ಯಾದ್ಯಂತ ಪ್ರತಿ ಹೋಬಳಿ, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ವಿಠ್ಠಲ ಹೇರೂರ ಅವರ ಪುಣ್ಯಸ್ಮರಣೆ ಆಚರಿಸಬೇಕು. ಗಂಗಾ ಆರತಿ ಮಹೋತ್ಸವ ಹಾಗೂ ಜನಜಾಗೃತಿ ಅಭಿಯಾನದಲ್ಲಿ ಸಮಾಜದ ಈ ಭಾಗದ ಜನರೂ ಭಾಗವಹಿಸಬೇಕು ಎಂದರು.

ಹುಬ್ಬಳ್ಳಿ ರಾಜವಿದ್ಯಾಶ್ರಮದ ಪೀಠಾಧಿಪತಿ ಶ್ರೀ ಷಡಕ್ಷರಿ ಸ್ವಾಮೀಜಿ, ಮಹಾಕಾಳಿ ಶಕ್ತಿಪೀಠದ ಶ್ರೀ ಬಸವರಾಜ ಗುರೂಜಿ, ಆನಂದ ಡೊಂಗಿ, ಗಂಗಾಧರ ದೊಡವಾಡ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net