ತಂಡಗಳ ಮಧ್ಯೆ ಮಾರಾಮಾರಿ

Crime_20250328011432227.jpg
Published on

ಪುತ್ತೂರು: ಹಣದ ವಿಚಾರದಲ್ಲಿ ಎರಡು ತಂಡಗಳ ನಡುವೆ ಮಾರಾಮಾರಿ ನಡೆದಿದ್ದು, ವಿಕೋಪಕ್ಕೆ ಹೋಗಿ ಇಬ್ಬರ ಮೇಲೆ ಮಾರಕಾಯುಧದಿಂದ ದಾಳಿ ನಡೆದಿದೆ.

ಈಶ್ವರಮಂಗಲ ಮೂಲದ ದೀಕ್ಷಿತ್ ರೈ ಹಾಗೂ ಸ್ವಸ್ತಿಕ್ ಗಾಯಗೊಂಡವರಾಗಿದ್ದಾರೆ. ದೀಕ್ಷಿತ್ ಪುತ್ತೂರಿನಿಂದ ಮಂಗಳೂರಿಗೆ ಹೆಚ್ಚಿನ ಚಿಕಿತ್ಸೆಗೆ ವರ್ಗಾಯಿಸಿದ್ದಾರೆ. ಪ್ರಜ್ವಲ್ ರೈ ಹಾಗೂ ದೀಕ್ಷಿತ್ ರೈ ಜತೆಗೆ ಗುರುತಿಸಿಕೊಂಡಿದ್ದು, ಕೆಲಸಮಯದಿಂದ ಇವರು ದೂರವಾಗಿದ್ದಾರೆನ್ನಲಾಗಿದೆ.

ಮಧ್ಯಾಹ್ನ ಪುತ್ತೂರು ಪೇಟೆಯ ದರ್ಬೆ ಸಮೀಪದ ಹೊಟೇಲ್ ಒಂದರಲ್ಲಿ ಪ್ರಾರಂಭದಲ್ಲಿ ಮಾತಿನ ಚಕಮಕಿ ನಡೆದಿದ್ದು, ನಗರ ಠಾಣೆಯ ಪೊಲೀಸರು ತೆರಳಿ ಸಮಾದಾನಿಸಿ ಕಳುಹಿಸಿದ್ದಾರೆ. ಸಂಜೆ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ನೆಕ್ಕಿಲಾಡಿಯಲ್ಲಿ ಮಾರಕಾಯುಧಗಳಿಂದ ದಾಳಿ ನಡೆದಿದೆ. ಪ್ರಜ್ವಲ್ ರೈ ತಂಡದಲ್ಲಿ ಯಾರೆಲ್ಲ ಇದ್ದರೆಂಬ ಮಾಹಿತಿ ಬಹಿರಂಗವಾಗಿಲ್ಲ. ಶಾಸಕ ಅಶೋಕ್ ಕುಮಾರ್ ರೈ ಜತೆಗೆ ಎರಡೂ ತಂಡದ ಸದಸ್ಯರು ಗುರುತಿಸಿಕೊಂಡವರೆಂಬ ಮಾತುಗಳು ಓಡಾಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net