

ಬೆಳಗಾವಿ: ಮಾರ್ಕೇಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿ (ಸಿಪಿಐ) ಪುತ್ರ ಸೇರಿ ಇಬ್ಬರು ಅಪ್ರಾಪ್ತರನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ರಿಮ್ಯಾಂಡ್ ಹೊಮ್ಗೆ ಕಳುಹಿಸಿಕೊಡಲಾಗಿದೆ.
ಮೇ 7 ರಂದು ಬೆಳಗಾವಿ ನಗರದ ಹೊರವಲಯದಲ್ಲಿನ ರೆಸಾರ್ಟ್‌ಗೆ ಬಾಲಕಿಯನ್ನು ಕರೆದೊಯ್ದಿದ್ದ ಬಂಧಿತರು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಈ ಕುರಿತು ಪ್ರಕರಣದ ದಾಖಲಿಸಿಕೊಂಡಿದ್ದ ಪೊಲೀಸರು, ಅಪ್ರಾಪ್ತರಿಗೆ ರೆಸಾರ್ಟ್‌ನಲ್ಲಿ ರೂಮ ನೀಡಿದ್ದ ರೆಸಾರ್ಟ್ ಮಾಲೀಕರಾದ ರೋಹನ್ ಪಾಟೀಲ, ಅಶತೋಷ ಪಾಟೀಲ ಮತ್ತು ಸಾಕೀಬ ಎನ್ನುವವರನ್ನು ಬಂಧಿಸಿದ್ದರು. ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಐದಕ್ಕೇರಿಕೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.