ಗಣೇಶೋತ್ಸವಕ್ಕೆ ವಿಜೃಂಭಣೆಯ ತೆರೆ

13bhr 3
Published on

ಬಾಳೆಹೊನ್ನೂರು: ಆದರ್ಶ ನಗರ ಇಟ್ಟಿಗೆ-ಸೀಗೋಡಿನ ವಿದ್ಯಾಗಣಪತಿ ಸೇವಾ ಸಮಿತಿಯ 42ನೇ ವರ್ಷದ ಗಣೇಶೋತ್ಸವಕ್ಕೆ ವಿಜೃಂಭಣೆಯ ತೆರೆ ಬಿದ್ದಿತು.
42ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ಗಣೇಶ ವಿಗ್ರಹವನ್ನು ಪ್ರತಿಷ್ಠಾಪಿಸಿ ಐದು ದಿನ ವಿಶೇಷ ಪೂಜೆ, ನಾನಾ ಧಾರ್ಮಿಕ ಕಾರ್ಯಕ್ರಮ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲಾಯಿತು.
ಕಡೆಯ ದಿನವಾದ ಬುಧವಾರ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ನಡೆಸಲಾಯಿತು. ವಿದ್ಯಾಗಣಪತಿ ಉತ್ಸವವನ್ನು ವಿಶೇಷ ರೀತಿಯಲ್ಲಿ ನಡೆಸಿದ್ದು ಪಟ್ಟಣದ ಜನತೆ ಸೇರಿದಂತೆ ಭಕ್ತರ ಗಮನ ಸೆಳೆಯಿತು. ಗಣೇಶನ ಮೆರವಣಿಗೆ ಸಾಗುವ ಇಟ್ಟಿಗೆ ಸೀಗೋಡು ಗ್ರಾಮದ ಮುಖ್ಯರಸ್ತೆಯಲ್ಲಿ ಸ್ಥಳೀಯರು ರಂಗೋಲಿಗಳನ್ನು ರಚಿಸಿದ್ದರು.
ಪಟ್ಟಣದ ಮುಖ್ಯಬೀದಿಯಲ್ಲಿ ವಿಶೇಷ ಸಂಚಾರಿ ರಸಮಂಜರಿ ಗಾನವೈಭವ, ನಾಸಿಕ್ ಡೋಲ್ ಸೇರಿದಂತೆ ವಿವಿಧ ಆಕರ್ಷಣೀಯ ವಾದ್ಯಗಳಿದ್ದವು.ಭದ್ರಾನದಿಯಲ್ಲಿ ಗಣೇಶ ವಿಗ್ರಹವನ್ನು ವಿಸರ್ಜಿಸಲಾಯಿತು.
ಸಮಿತಿ ಪದಾಧಿಕಾರಿಗಳಾದ ರಾಘವೇಂದ್ರ, ಎಸ್.ಕೆ.ವೆಂಕಟೇಶ್, ಕಾರ್ತಿಕ್ ಕಾರ್‌ಗದ್ದೆ, ಕೋಶಾಧಿಕಾರಿ ಕೆ.ಪ್ರಶಾಂತ್‌ಕುಮಾರ್, ಎಸ್.ಎ.ಶ್ರೀನಿವಾಸನಾಯ್ಕ, ಹರೀಶ್, ಎಚ್.ಎಂ.ಪುರುಷೋತ್ತಮ್, ಶಿವಕುಮಾರ್, ಸುಧಾಕರ್, ಮಹೇಶ್, ಸಂತೋಷ್, ವಿಘ್ನೇಶ್, ಮಧುಸೂದನ್, ಜಗದೀಶ್, ಪ್ರಕಾಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net