ಸೆ.18ರಿಂದ ಗಣೇಶೋತ್ಸವ ಸಂಗೀತ ಸುಧೆ

ganesha
Published on

ಶಿವಮೊಗ್ಗ: ನಗರದ ವಿದ್ಯಾಗಣಪತಿ ಸೇವಾಸಂಘದಿAದ ಸೆ.18ರಿಂದ 25ರವರೆಗೆ 76ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಶಾಸಿöÃಯ ಸಂಗೀತ ಏರ್ಪಡಿಸಲಾಗಿದೆ. ವಿವಿಧ ರಾಜ್ಯಗಳ ಖ್ಯಾತನಾಮರು ಕಾರ್ಯಕ್ರಮ ಪ್ರಸ್ತುತಪಡಿಸಲಿದ್ದಾರೆ ಎಂದು ಸಂಘದ ಕಾರ್ಯದರ್ಶಿ ಎಚ್.ಆರ್.ಸುಬ್ರಹ್ಮಣ್ಯ ಶಾಸಿö ತಿಳಿಸಿದರು.

ನಗರದ ಕೋಟೆ ಮಾರಿಕಾಂಬಾ ದೇವಾಲಯದ ಆವರಣಲ್ಲಿ ಸೆ.೧೮ರಂದು ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗುವುದು. 19ರಿಂದ 25ರವರೆಗೆ ಪ್ರತಿದಿನ ಸಂಜೆ 5.30ಕ್ಕೆ ಶಾಸಿöÃಯ ಸಂಗೀತ ಕಾರ್ಯಕ್ರಮ ಆರಂಭವಾಗಲಿದೆ. ಮೊದಲ ಒಂದು ತಾಸು ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
19ರಂದು ಹರಕೋಡು ವೇಣು ಮಾಧವ ಅವರಿಂದ ಸ್ಯಾಕ್ಸೋಫೋನ್, 6.30ಕ್ಕೆ ಪಂಡಿತ್ ರಾಕೇಶ್ ಚೌರಾಸಿಯಾ ಅವರಿಂದ ಹಿಂದುಸ್ತಾನಿ ಕೊಳಲು ವಾದನ, 20ರಂದು ರೇಣುಕಾ ಆರ್.ಕಾರಂತ್, ಧಾತ್ರಿಕುಮಾರ್ ಅವರಿಂದ ಹಿಂದುಸ್ತಾನಿ ಗಾಯನ, ೨೧ರಂದು ಸೌಮ್ಯ ಕೇಶವ, ಹೊಸಹಳ್ಳಿ ಕಾರ್ತಿಕ್ ಅವರಿಂದ ಹಾಡುಗಾರಿಕೆ, 22ರಂದು ಸುಜಾತಾ ಚಿದಂಬರ, ಚೆನ್ನೆÊನ ವಸುಧಾ ರವಿ ಹಾಡುಗಾರಿಕೆ ಪ್ರಸ್ತುತಪಡಿಸಲಿದ್ದಾರೆ. 23ರಂದು ವಾಣಿ ಮತ್ತು ನಿಹಾರಿಕಾ ಅವರಿಂದ ಯುಗಳ ವೀಣಾ ವಾದನ, ವೈ.ಜಿ.ಶ್ರೀಲತಾ ಅವರಿಂದ ವೀಣಾ ವಾದನ, 24ರಂದು ಪೂಜಿತ್ ತೇಜಸ್ವಿ, ಚೆನ್ನೆÊನ ವಿವೇಕ್ ಸದಾಶಿವಂ ಅವರಿಂದ ಹಾಡುಗಾರಿಕೆ, 25ರಂದು ಪಿ.ಚಂದ್ರಜ್ಯೋತಿ ಮತ್ತು ಮೇಧಾ ಮಂಜುನಾಥ್ ಅವರಿಂದ ಹಾಡುಗಾರಿಕೆ ಇರಲಿದೆ ಎಂದರು.
ಅಧ್ಯಕ್ಷ ಪ್ರೊ.ಎಚ್.ಆರ್.ಶಂಕರನಾರಾಯಣ ಶಾಸ್ತಿç ಮಾತನಾಡಿ, 26ರ ಸಂಜೆ 6.30ಕ್ಕೆ ರಾಜಬೀದಿ ಉತ್ಸವದ ಮೂಲಕ ಗಣಪತಿಯನ್ನು ವಿಸರ್ಜನೆ ಮಾಡಲಾಗುವುದು ಎಂದು ತಿಳಿಸಿದರು.
ಉಪಾಧ್ಯಕ್ಷ ಕೆ.ಎಸ್.ಶ್ರೀಕಂಠ ಜೋಯ್ಸ್, ಸಹ ಕಾರ್ಯದರ್ಶಿ ಎಸ್.ಜಿ.ಆನಂದ್, ಖಜಾಂಚಿ ಎಚ್.ಡಿ.ಮೋಹನ ಶಾಸ್ತಿç, ಸಲಹಾ ಸಮಿತಿ ಸದಸ್ಯ ಡಿ.ಎಸ್.ನಟರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net