ಚಾರೋಡಿಯಲ್ಲಿ ಗಣೇಶೋತ್ಸವ ಸಂಪನ್ನ

charodi
ಶಿರೂರು ಹಡವಿನಕೋಣೆಯ ಗಣೇಶೋತ್ಸವದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಗರಿಷ್ಠ ಅಂಕ ಪಡೆದ ಮೇಸ್ತ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನಿಸಲಾಯಿತು
Published on

ಬೈಂದೂರು: ಚಾರೋಡಿ ಮೇಸ್ತ ಸಮಾಜ ಹಡವಿನಕೋಣೆಯ ಶ್ರೀ ಗಣೇಶ ಸೇವಾ ಸಂಘದ 43ನೇ ಗಣೇಶೋತ್ಸವ ವೈಭವದಿಂದ ನೆರವೇರಿತು.
ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶಾಸಕ ಗುರುರಾಜ್ ಗಂಟೆಹೊಳೆ ಶುಭಹಾರೈಸಿದರು. ಶ್ರೀ ಗಣೇಶ ಸೇವಾ ಸಂಘ ಅಧ್ಯಕ್ಷ ವಿಶ್ವನಾಥ ಜಿ.ಮೇಸ್ತ ಅಧ್ಯಕ್ಷತೆ ವಹಿಸಿದ್ದರು. ಅಖಿಲ ಕರ್ನಾಟಕ ಚಾರೋಡಿ ಮೇಸ್ತ ಸಮಾಜದ ರಾಜ್ಯಾಧ್ಯಕ್ಷ ರಾಮಚಂದ್ರ ಬಿ. ಶಿರೂರಕರ್, ತಾಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ, ಶಿರೂರು ಚಾರೋಡಿ ಮೇಸ್ತ ಸಮಾಜದ ಉಪಾಧ್ಯಕ್ಷ ಸುಹಾಸ್ ಚಂದ್ರಹಾಸ ಶಿರೂರಕರ್, ಶ್ರೀ ಗಣೇಶ ಯುವಕ ಮಿತ್ರ ಮಂಡಳಿ ಅಧ್ಯಕ್ಷ ಅಣ್ಣಪ್ಪ ವಿ. ಮೇಸ್ತ, ಶೌರ್ಯ ವಿಪತ್ತು ಘಟಕ ಅಧ್ಯಕ್ಷ ಪ್ರಕಾಶ ಬಿ. ಮೇಸ್ತ, ಶ್ರೀ ಜಯ ಗಣೇಶ ಮಹಿಳಾ ಮಂಡಳಿ ಅಧ್ಯಕ್ಷೆ ವಿಶ್ಮಿತಾ ಎಸ್. ಮೇಸ್ತ ಉಪಸ್ಥಿತರಿದ್ದರು. ರುಚಿತಾ ಪ್ರಕಾಶ್ ಸ್ವಾಗತಿಸಿದರು. ಅಕ್ಷತಾ ಕೇಶವ್ ವಂದಿಸಿದರು. ಸಂತೋಷ್ ಬಾಬು ನಿರೂಪಿಸಿದರು. ಅಶ್ವಥ್ ಆರ್. ಮೇಸ್ತ, ಸಿಂಚನ ಸಹಕರಿಸಿದರು.

ಬಹುಮಾನ ವಿತರಣೆ

ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಗರಿಷ್ಠ ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನಿಸಲಾಯಿತು. ಕ್ರೀಡೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವೈದ್ಯಕೀಯದಲ್ಲಿ ಸೇವೆಗಾಗಿ ಡಾ.ಸತ್ಯಪ್ರಸಾದ ರಾವ್, ಸಮಾಜದ ಹಿರಿಯರಾದ ಬಾಬು ನಿಲಯ್ಯ ಮೇಸ್ತ, ಅನ್ನದಾನಿಗಳಾದ ಶೋಭಾ ಬಾಬು ಕುಟುಂಬ, ರತ್ನ ರಾಮಚಂದ್ರ ಮೇಸ್ತ ಕುಟುಂಬ ಹಾಗೂ ಮುಕಾಂಬು ಉದಯ ಮೇಸ್ತ ಕುಟುಂಬವನ್ನು ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net