ಬಿ.ಸಿ.ರೋಡ್‌ನಲ್ಲಿ 45ನೇ ವರ್ಷದ ಶೋಭಾಯಾತ್ರೆ

ganesha
Published on

ಬಂಟ್ವಾಳ: ಹಿಂದು ಧಾರ್ಮಿಕ ಸೇವಾ ಸಮಿತಿ ಆಶ್ರಯದಲ್ಲಿ, ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಸ್ಥಾನದ ವಠಾರದಲ್ಲಿ, 45ನೇ ವರ್ಷದ ಗಣೇಶೋತ್ಸವದ ಭವ್ಯ ಶೋಭಾಯಾತ್ರೆ ಮಂಗಳವಾರ ಸಂಜೆ ಬಿ.ಸಿ.ರೋಡಿನಲ್ಲಿ ವಿಜೃಂಭಣೆಯಿಂದ ನಡೆಯಿತು.

ಶ್ರೀ ಗಣೇಶನ ವಿಗ್ರಹಕ್ಕೆ ವಿಸರ್ಜನಾ ಪೂಜೆ ನೆರವೇರಿಸಿ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು. ವಿವಿಧ ಸಂಘ-ಸಂಸ್ಥೆಗಳ ಟ್ಯಾಬ್ಲೋಗಳು, ಹುಲಿ ಕುಣಿತ, ಗೊಂಬೆ ಕುಣಿತ, ಚೆಂಡೆ ವಾದನ ಶೋಭಾಯಾತ್ರೆಗೆ ಮೆರುಗು ನೀಡಿತು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಬಿ.ಸಿ.ರೋಡ್‌ನ ರಸ್ತೆ ಇಕ್ಕೆಲ, ಕಟ್ಟಡಗಳಲ್ಲಿ ನಿಂತು ಶೋಭಾಯಾತ್ರೆಯನ್ನು ಕಣ್ತುಂಬಿಕೊಂಡರು. ಶೋಭಾಯಾತ್ರೆ ರಕ್ತೇಶ್ವರಿ ದೇವಸ್ಥಾನದ ಬಳಿಯಿಂದ ಹೊರಟು ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗಿ, ಕೈಕಂಬ, ತಲಪಾಡಿ, ಮೊಡಂಕಾಪುವಿಗೆ ಹೋಗಿ ಬಳಿಕ ವಾಪಸ್ಸು ಬಿ.ಸಿ.ರೋಡಿಗೆ ಬಂದು ಬಂಟ್ವಾಳ ಬೈಪಾಸ್ ರಸ್ತೆ ಮೂಲಕ ತೆರಳಿ, ಬಂಟ್ವಾಳದ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದ ಬಳಿ ನೇತ್ರಾವತಿ ನದಿಯಲ್ಲಿ ಜಲಸ್ತಂಭನಗೊಳಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net