

ಹೆಬ್ರಿ: ಹೆಬ್ರಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ನಡೆಯುವ ಗಣೇಶೋತ್ಸವ ಸುವರ್ಣ ಸಂಭ್ರಮದಲ್ಲಿದ್ದು ವಿಶೇಷವಾಗಿ ಆಚರಿಸಲು ಭಾನುವಾರ ಹೆಬ್ರಿ ಶ್ರೀರಾಮ ಮಂದಿರಲ್ಲಿ ಪೂರ್ವಭಾವಿ ಸಭೆ ಸಮಿತಿ ಅಧ್ಯಕ್ಷ ಎಚ್.ಜನಾರ್ದನ್ ಅಧ್ಯಕ್ಷತೆಯಲ್ಲಿ ನಡೆಯಿತು.
ಗೌರವಾಧ್ಯಕ್ಷರಾದ ಎಚ್.ಗುಂಡೂ ನಾಯಕ್, ಪೂರ್ವಾಧ್ಯಕ್ಷ ಎಚ್. ಭಾಸ್ಕರ ಜೋಯಿಸ್, ಸಮಿತಿ ಪ್ರಧಾನ ಕಾರ್ಯದರ್ಶಿ ನರೇಂದ್ರ ನಾಯಕ್, ಸಮಿತಿ ಪದಾಧಿಕಾರಿಗಳಾದ ಪ್ರಕಾಶ ಮಲ್ಯ, ದಿವಾಕರ ಶೆಟ್ಟಿ, ಶಂಕರ ಶೇರಿಗಾರ್, ದೇವಾನಂದ ನಾಯಕ್, ಎಚ್.ಕೆ.ಸುಧಾಕರ್ ಉಪಸ್ಥಿತರಿದ್ದರು. ಮುಖಂಡ ಎಚ್.ಪ್ರವೀಣ್ ಬಲ್ಲಾಳ್, ಅರ್ಚಕ ನಾಗರಾಜ ಜೋಯಿಸ್ ಮೊದಲಾದವರಿದ್ದರು. ಪ್ರಸಾದ್ ಶೆಟ್ಟಿ ನಿರೂಪಿಸಿದರು.