ಗಣೇಶೋತ್ಸವವನ್ನು ಸರಳವಾಗಿ ಆಚರಿಸುವುದರ ಸಭೆ

Ganesha Murthy, Chitradurga, Corona,
Published on

ಬೆಳಗಾವಿ: ಕೋವಿಡ್-19 ಹಿನ್ನೆಲೆಯಲ್ಲಿ ಈ ಬಾರಿ ಗಣೇಶೋತ್ಸವವನ್ನು ಸರಳವಾಗಿ ಆಚರಿಸುವುದರ ಜತೆಗೆ 2 ಅಡಿ ಎತ್ತರದ ಮೂರ್ತಿ ಪ್ರತಿಷ್ಠಾಪಿಸುವ ಕುರಿತು ಮಂಗಳವಾರ ಹುತಾತ್ಮ ಚೌಕದ ಗಣೇಶೋತ್ಸವ ಮಂಡಳಿಯ ಸಭೆಯಲ್ಲಿ ಪದಾಧಿಕಾರಿಗಳು, ಸದಸ್ಯರು ಸೇರಿ ಪ್ರಮುಖ ನಿರ್ಣಯ ಕೈಗೊಂಡರು.

ಕರೊನಾ ಕಾರಣ ಸರಳ ರೀತಿಯಲ್ಲಿ ಉತ್ಸವ ಆಚರಿಸುವುದು, ಒಂದೂವರೆ ದಿನ ಮೂರ್ತಿ ಪ್ರತಿಷ್ಠಾಪಿಸುವುದು, ಮೂರ್ತಿಯನ್ನು ನಂತರ ರಾಮದೇವ ಗಲ್ಲಿಯ ರಾಮ
ಮಂದಿರದಲ್ಲಿ ಪ್ರತಿಷ್ಠಾಪಿಸಲು ನಿರ್ಧರಿಸಲಾಯಿತು. ಅಶೋಕ ಪೋತ ದಾರ, ಶಿವಾಜಿ ಹಂಡೆ, ರಾಜಕುಮಾರ ಕಲಘಟಗಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net