ಪತ್ರಿಕೆ ವಿತರಕರಿಗೆ ಮಹಾಮಂಡಳದಿಂದ ಸನ್ಮಾನ

IMG-20230910-WA0014-1.jpg
Published on

ಹುಬ್ಬಳ್ಳಿ: ಇಲ್ಲಿಯ ಮೂರುಸಾವಿರ ಮಠದಲ್ಲಿ ಪತ್ರಿಕೆ ವಿತರಕರ ದಿನಾಚರಣೆ ಪ್ರಯುಕ್ತ ಹುಬ್ಬಳ್ಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳವು ಸನ್ಮಾನ ಸಮಾರಂಭ ಏರ್ಪಡಿಸಿತ್ತು.

ಪತ್ರಿಕೆ ವಿತರಕರಾದ ಸಂಗೀತಾ ಶೆಟ್ಟರ್, ರವೀಂದ್ರ ಚವ್ಹಾಣ ಇವರನ್ನು ಮಹಾಮಂಡಳದ ಅಧ್ಯಕ್ಷ ಮೋಹನ ಲಿಂಬಿಕಾಯಿ ಅವರು ಸನ್ಮಾನಿಸಿದರು.

ಮಹಾಮಂಡಳ ಉಪಾಧ್ಯಕ್ಷ ಶಾಂತರಾಜ ೋಳ ಮಾತನಾಡಿ, ಪತ್ರಿಕೆ ವಿತರಕರಲ್ಲಿ ವಿದ್ಯಾಥಿರ್ಗಳ ಸಂಖ್ಯೆ ಹೆಚ್ಚಿಗೆ ಇದೆ. ಇದು ಅವರ ಶಿಕ್ಷಣಕ್ಕೆ ಹೆಚ್ಚಿನ ಸಹಕಾರ ನೀಡಲಿದೆ. ಇದೊಂದು ಪವಿತ್ರ ಕಾಯಕ ಎಂದರು.

ಸಿದ್ದಣ್ಣ ಅಂಗಡಿ, ವಿಜಯಲಕ್ಷ್ಮಿ ಹಿರೇಮಠ, ಮಹೇಶ ಶೇಟ್, ಅಮರೇಶ ಹಿಪ್ಪರಗಿ, ರೋಹನ ಗೋಂದಕರ, ರೂಪಾ ಅಂಗಡಿ, ಅಕ್ಕಮ್ಮ ಕಂಬಳಿ, ಸಾಧನಾ ಪೂಜಾರ, ಚನ್ನಬಸಪ್ಪ ಧಾರವಾಡಶೆಟ್ಟರ್, ರೋಹಿತ ಗೋಂದಕರ, ತಾರಾಮತಿ ಪೋಳ, ಸುಜಾತಾ ಪಾಟೀಲ ಇತರರು ಪಾಲ್ಗೊಂಡಿದ್ದರು.

ಎಸ್.ಎಸ್. ಕಮಡೊಳ್ಳಿಶೆಟ್ಟರ್ ಸ್ವಾಗತಿಸಿದರು. ಅನಿಲ್ ಬೇವಿನಕಟ್ಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net