ಗಣೇಶನ ಉತ್ಸವಕ್ಕೆ ಜಾತಿ, ಮತ ಭೇದವಿಲ್ಲ : ಕೆಎಸ್‌ಆರ್‌ಟಿಸಿ ನಿವೃತ್ತ ಅಧಿಕಾರಿ ರತ್ನಾಕರ್ ಗಟ್ಟಿ ಅಭಿಮತ

New Project (38)
Published on

ಉಳ್ಳಾಲ: ಸ್ವಾತಂತ್ರೃಪೂರ್ವದಲ್ಲಿ ಹಿಂದು ಸಮಾಜದಲ್ಲಿ ಒಗ್ಗಟ್ಟು ಮೂಡಿಸುವ ನಿಟ್ಟಿನಲ್ಲಿ ಶಿವಾಜಿ ಮಹಾರಾಜರು ಗಣೇಶೋತ್ಸವ ಪ್ರಾರಂಭಿಸಿದ್ದು, ನಂತರದ ದಿನಗಳಲ್ಲಿ ಬಾಲ ಗಂಗಾಧರ ತಿಲಕ್ ನೇತೃತ್ವದಲ್ಲಿ ಸಾರ್ವಜನಿಕ ಗಣೇಶೋತ್ಸವ ವ್ಯಾಪಕ ಚಳವಳಿಯಾಗಿ ರೂಪುಗೊಂಡಿತು. ಇಂದಿಗೂ ಪ್ರತಿಹಳ್ಳಿಯಲ್ಲಿ ಗಣೇಶೋತ್ಸವವನ್ನು ಎಲ್ಲರೂ ಒಟ್ಟಾಗಿ ಸೇರಿ ಜಾತಿ, ಭೇದವಿಲ್ಲದೆ ಪರಸ್ಪರ ಸಹಕಾರದಿಂದ ಆಚರಿಸುತ್ತಿದ್ದಾರೆ ಎಂದು ಕೆಎಸ್‌ಆರ್‌ಟಿಸಿ ನಿವೃತ್ತ ಅಧಿಕಾರಿ ರತ್ನಾಕರ್ ಗಟ್ಟಿ ಮಂಗಳೂರು ಹೇಳಿದರು.

ಕುತ್ತಾರು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನದಲ್ಲಿ 39ನೇ ವರ್ಷದ ಸಾರ್ವಜನಿಕ ಕುತ್ತಾರು ಗಣೇಶೋತ್ಸವದ ಪ್ರಯುಕ್ತ ಶ್ರೀ ರಾಜರಾಜೇಶ್ವರಿ ವೇದಿಕೆಯಲ್ಲಿ ಜರುಗಿದ ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿದರು.

ಮಾಜಿ ಶಾಸಕ ಕೆ.ಜಯರಾಮ ಶೆಟ್ಟಿ, ಬಿಜೆಪಿ ಮಂಗಳೂರು ಮಂಡಲ ಅಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲ್, ನಿಕಟಪೂರ್ವ ಅಧ್ಯಕ್ಷ ಚಂದ್ರಹಾಸ್ ಪಂಡಿತ್‌ಹೌಸ್, ಮೈಸೂರ್ ಇಲೆಕ್ಟ್ರಿಕಲ್ಸ್ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರು, ಉಳ್ಳಾಲಬೈಲ್ ವೈದ್ಯನಾಥ ದೈವಸ್ಥಾನ ಅಧ್ಯಕ್ಷ ಪ್ರವೀಣ್ ಕುಮಾರ್ ಯು., ಸೋಮೇಶ್ವರ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗಟ್ಟಿ ಪರ್ಯತ್ತೂರು, ಉದ್ಯಮಿಗಳಾದ ಸುಚಿವೃತ ಶೆಟ್ಟಿ, ಗಣೇಶ್ ಕುಮಾರ್, ವಿವೇಕ್ ಶೆಟ್ಟಿ, ಗಣೇಶ್ ಕೆ.ಟಿ., ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಚಂದ್ರಹಾಸ ಕೊಟ್ಟಾರಿ, ಅಧ್ಯಕ್ಷ ರಾಜೇಶ್ ಅತ್ತಾವರ, ಪುಷ್ಪರಾಜ್ ಸನಿಲ್, ಉಪಾಧ್ಯಕ್ಷ ಜಗನ್ನಾಥ ಸಾಲಿಯಾನ್, ಕಾರ್ಯದರ್ಶಿ ಮಾಧವ ಬಂಗೇರ, ಸಂಘಟನಾ ಕಾರ್ಯದರ್ಶಿ ಗೌತಮ್ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.

ಪವಿತ್ರಕುಮಾರ್ ಗಟ್ಟಿ ಸ್ವಾಗತಿಸಿದರು. ಶಶಿಕಲಾ ಗಟ್ಟಿ ಪ್ರಶಸ್ತಿ ವಿಜೇತರ ವಿವರ ಓದಿದರು. ಸುನಿತಾ ಗಟ್ಟಿ ವಂದಿಸಿದರು. ಹರೀಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net