ಕಿಳಿಂಗಾರಲ್ಲಿ ಗಣೇಶ ಚಿತ್ರ ರಚನೆ ಸ್ಪರ್ಧೆ

ganesha
Published on

ಬದಿಯಡ್ಕ: ಕಿಳಿಂಗಾರ್ ಯುವಕೇಸರಿ ಆರ್ಟ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಗಣೇಶ ಚೌತಿಯ ಪ್ರಯುಕ್ತ ಶಾಲಾ ಮಕ್ಕಳಿಗೆ ಗಣೇಶನ ಚಿತ್ರ ರಚನೆ ಸ್ಪರ್ಧೆ, ಇತ್ತೀಚೆಗೆ ಕಿಳಿಂಗಾರು ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿತು.

ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಹೈಸ್ಕೂಲ್ ವಿಭಾಗದ ವಿದ್ಯಾರ್ಥಿಗಳಿಗಾಗಿ ಸ್ಪರ್ಧೆ ನಡೆಸಲಾಯಿತು. ಯುವಕೇಸರಿ ಕ್ಲಬ್‌ನ ಅಧ್ಯಕ್ಷ ಪ್ರವೀಣ್ ಅಧ್ಯಕ್ಷತೆ ವಹಿಸಿದ್ದರು. ಕಿಳಿಂಗಾರ್ ಶಾಲಾ ಅಧ್ಯಾಪಕಿ ಸುನೀತಾ ಉದ್ಘಾಟಿಸಿದರು.

ಪ್ರಮುಖರಾದ ಕಿಶನ್‌ರಾಜ್, ಗಣೇಶ, ಸುಧಾಕರ, ಸುರೇಶ, ರಾಮ, ರಕ್ಷಿತ್, ರಾಕೇಶ್, ಮನೋಜ್, ವಸಂತ, ಅನಿಲ್ ಶುಭ ಹಾರೈಸಿದರು. ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಅದ್ವಿತ್ ಎ. ಪ್ರಥಮ, ಧನೀಶ್ ಕೆ. ದ್ವಿತೀಯ, ಅನಾಮಿಕ ಎ. ತೃತೀಯ, ಹಿರಿಯ ಪ್ರಾಥಮಿಕ ವಿಭಾಗದಲ್ಲಿ ವಿ.ಎಂ.ಮಧುರ ಪ್ರಥಮ, ಅಭಿಷೇಕ್ ಎ. ದ್ವಿತೀಯ, ಪ್ರಿಯಾ ತೃತೀಯ ಹಾಗೂ ಹೈಸ್ಕೂಲ್ ವಿಭಾಗದಲ್ಲಿ ಶಿಖಾ ಪ್ರಥಮ, ಶ್ರೀಶ್ಮ ದ್ವಿತೀಯ, ಅನುನಂದ್ ತೃತೀಯ ಬಹುಮಾನ ಪಡೆದರು. ಕಿಶನ್‌ರಾಜ್ ಕಿಳಿಂಗಾರ್, ಮೋಹನ್‌ದಾಸ್ ಅನ್ನೆಪಲ್ಲಡ್ಕ, ಸಂತೋಷ್ ಕಿಳಿಂಗಾರ್ ತೀರ್ಪುಗಾರರಾಗಿ ಸಹಕರಿಸಿದರು. ನಾರಾಯಣ ಪಿ.ಪೆರಡಾಲ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net