ಗಣೇಶ ಮೊದಲಿಯಾರ್ ಸೇವೆ ಅನನ್ಯ

03Ravig5
ಬೆಳಗಾವಿಯ ಪೊಲೀಸ್ ಸಮುದಾಯ ಭವನದಲ್ಲಿ ಭಾನುವಾರ ನಿವೃತ್ತ ಪೊಲೀಸ್ ಅಕಾರಿ ಗಣೇಶ ಮೊದಲಿಯಾರ್ ಅವರನ್ನು ಜಿಲ್ಲಾ ನಿವೃತ್ತ ಪೊಲೀಸ್ ಅಕಾರಿಗಳ ವೇದಿಕೆ ವತಿಯಿಂದ ಸನ್ಮಾನಿಸಲಾಯಿತು. ನಿವೃತ್ತ ಐಜಿಪಿ ಎಸ್.ಎಸ್.ಪಾವಟೆ, ಬಿ.ಆರ್.ಮೆಳವಂಕಿ, ಎಸ್.ಎಸ್.ಮುರಗೋಡ, ಅಶೋಕ ಕುರೇರ, ಅಶೋಕ ಸದಲಗೆ ಇದ್ದರು.
Published on

ಬೆಳಗಾವಿ: ಸ್ವಾತಂತ್ರ ಪೂರ್ವದಲ್ಲಿ ಆಡಳಿತ ಭಾಷೆ ಇಂಗ್ಲಿಷನಲ್ಲಿತ್ತು. ಆಗಿನ ಪೊಲೀಸ್ ಅಕಾರಿಗಳು ಮುಂಬೈ ಪ್ರಾಂತದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿ ಹೆಸರು ಗಳಿಸಿದ್ದರು. ಅವರಲ್ಲಿ ಶತಾಯುಷಿ ಗಣೇಶ ಮೊದಲಿಯಾರ್ ಪ್ರಮುಖರಾಗಿದ್ದಾರೆ ಎಂದು ನಿವೃತ್ತ ಐಜಿಪಿ ಎಸ್.ಎಸ್.ಪಾವಟೆ ಹೇಳಿದರು.

ನಿವೃತ್ತ ಪೊಲೀಸ್ ಅಕಾರಿ ಗಣೇಶ ಮೊದಲಿಯಾರ್ ಅವರು ಶತಾಯುಷಿಗಳಾದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾ ನಿವೃತ್ತ ಪೊಲೀಸ್ ಅಕಾರಿಗಳ ವೇದಿಕೆಯಿಂದ ಭಾನುವಾರ ನಗರದ ಪೊಲೀಸ್ ಸಮುದಾಯ ಭವನದಲ್ಲಿ ಸನ್ಮಾನಿಸಿ ಮಾತನಾಡಿದರು. ಬೆಳಗಾವಿ ಜಿಲ್ಲಾ ನಿವೃತ್ತ ಪೊಲೀಸ್‌ಅಕಾರಿಗಳ ವೇದಿಕೆ ಪ್ರಾರಂಭವಾಗಿ 25 ವರ್ಷಗಳು ಗತಿಸಿವೆ. 1997ರಲ್ಲಿ ಎಲ್ಲ ನಿವೃತ್ತ ಪೊಲೀಸ್ ಅಕಾರಿಗಳನ್ನು ಒಂದೆಡೆ ಸೇರಿಸಿ ವೇದಿಕೆ ಆರಂಭಿಸಲಾಯಿತು. ಇಬ್ಬರು ಅಕಾರಿಗಳು ಈಗ 90 ವರ್ಷ ಪೂರೈಸಿದ್ದಾರೆ. ಅವರ ಜೀವನ ಸುಖಕರವಾಗಿರಲಿ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಪೊಲೀಸ್ ಅಕಾರಿ ಗಣೇಶ ಮೊದಲಿಯಾರ್ ಅವರು, ಮಹಾರಾಷ್ಟ್ರ ಸರ್ಕಾರದಲ್ಲಿ ನೌಕರಿ ಮಾಡಿ ನಿವೃತ್ತಿಯಾದೆ. ಆದರೆ, ಕರ್ನಾಟಕದಿಂದಲೇ ಹೆಚ್ಚಿನ ಪ್ರೀತಿ, ಪ್ರೇಮ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ನಿವೃತ್ತ ಎಸ್‌ಪಿ ಬಿ.ಆರ್.ಮೆಳವಂಕಿ, ಎಸ್.ಎಸ್.ಮುರಗೋಡ, ಅಶೋಕ ಕುರೇರ, ಅಶೋಕ ಸದಲಗೆ, ಆರ್.ಬಿ. ಪಾಟೀಲ, ಎಸ್.ಎಸ್.ಕೇರಿ, ಎಸ್.ಸಿ.ಅಂಗಡಿ ಸೇರಿ ಬೆಳಗಾವಿ ಜಿಲ್ಲಾ ನಿವೃತ್ತ ಪೊಲೀಸ್ ಅಕಾರಿಗಳ ವೇದಿಕೆ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net