ರಾಜಧಾನಿಯಲ್ಲಿ 3ಲಕ್ಷಕ್ಕೂ ಅಧಿಕ ಗಣೇಶ ಮೂರ್ತಿ ವಿಸರ್ಜನೆ

ganesh
Published on

ಬೆಂಗಳೂರು: ರಾಜಧಾನಿಯಲ್ಲಿ ಮೂರು ದಿನದಲ್ಲಿ 3 ಲಕ್ಷಕ್ಕೂ ಅಧಿಕ ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಗಿದೆ.


ಸ್ಯಾಂಕಿ ಕೆರೆ, ಹಲಸೂರು ಕೆರೆ, ಯಡಿಯೂರು ಕೆರೆ, ಹೆಬ್ಬಾಳ ಕೆರೆ ಸೇರಿ ಕಲ್ಯಾಣಿಗಳಲ್ಲಿ ಬುಧವಾರ 1,19,718 ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಗಿದೆ. ದಕ್ಷಿಣ 40,131, ಪೂರ್ವ 32,975, ಪಶ್ಚಿಮ 25,010, ಯಲಹಂಕ 6,559 ಆರ್.ಆರ್.ನಗರ 5,747, ಮಹದೇವಪುರ 5,742, ಬೊಮ್ಮನಹಳ್ಳಿ 2,646 ಹಾಗೂ ದಾಸರಹಳ್ಳಿ ವಲಯದಲ್ಲಿ 909 ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ. ಕೆಲವೆಡೆ ವಸತಿ ಪ್ರದೇಶದಿಂದ ಕೆರೆಗಳು ದೂರ ಇರುವ ಹಿನ್ನೆಲೆಯಲ್ಲಿ ವಾರ್ಡ್‌ಗಳಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿರುವ ಸಂಚಾರಿ ವಿಸರ್ಜನಾ ಘಟಕಗಳಲ್ಲಿ (ಮೊಬೈಲ್ ಟ್ಯಾಂಕ್) ವಿಸರ್ಜನೆಗೆ ಅವಕಾಶ ಕಲ್ಪಿಸಲಾಗಿತ್ತು.


ನಗರದಲ್ಲಿ ಪ್ಲಾಸ್ಟರ್ ಆಫ್​​ ಪ್ಯಾರೀಸ್ (ಪಿಒಪಿ) ಬಳಸಿ ಗಣೇಶ ಮೂರ್ತಿ ತಯಾರಿಸಿದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಬಿಬಿಎಂಪಿ ಎಚ್ಚರಿಕೆ ನೀಡಿತ್ತು. ಪರಿಸರಸ್ನೇಹಿ ಗಣೇಶ ಮಾತ್ರ ಪ್ರತಿಷ್ಠಾಪಿಸಬೇಕು. ರಾಸಾಯನಿಕ ಬಣ್ಣ, ಥರ್ಮಾಕೋಲ್ ಹಾಗೂ ಪಿಒಪಿ ಬಳಸಿ ತಯಾರಿಸುವ ಮೂರ್ತಿಯನ್ನು ನಿಷೇಧಿಸಲಾಗಿದೆ. ರಾಸಾಯಾನಿಕ ವಸ್ತುಗಳನ್ನು ಬಳಸಿ ತಯಾರಿಸಿ ಮಾರಾಟ ಮಾಡಿದಲ್ಲಿ ದಂಡ ವಿಧಿಸಿ, ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು. ನಿಷೇಧಿಸಿದ ವಸ್ತುಗಳನ್ನು ಮುಲಾಜಿಲ್ಲದೆ ಜಪ್ತಿ ಮಾಡುವುದಾಗಿ ಪಾಲಿಕೆ ಆದೇಶಿಸಿತ್ತು. ಆದರೂ ಈ ಬಾರಿ ಗಣೇಶ ಹಬ್ಬದಲ್ಲಿ 50ಕ್ಕೂ ಅಧಿಕ ಪ್ಲಾಸ್ಟರ್ ಆ್ ಪ್ಯಾರೀಸ್( ಪಿಒಪಿ) ಗಣೇಶಮೂರ್ತಿ ವಿಸರ್ಜಿಸಿರುವುದು ಕಂಡುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net