ಸೌಹಾರ್ದದ ಪ್ರತೀಕ ಗಣೇಶ ಹಬ್ಬ

30blh1 ganesh
Published on

ಬೈಲಹೊಂಗಲ: ಗಣಪತಿ ಹಬ್ಬ ಸೌಹಾರ್ದದ ಪ್ರತೀಕವಾಗಿದ್ದು, ವಿವಿಧತೆಯಲ್ಲಿ ಐಕಮತ್ಯ ಸಾರುತ್ತದೆ ಎಂದು ಚಿತ್ರನಟ ಶಿವರಂಜನ ಬೋಳನ್ನವರ ಹೇಳಿದರು.

ನಗರದ ಕುಲಕರ್ಣಿ ಗಲ್ಲಿಯಲ್ಲಿ ವರಸಿದ್ಧಿ ವಿನಾಯಕ ಗೆಳೆಯರ ಬಳಗದಿಂದ ಶನಿವಾರ ಹಮ್ಮಿಕೊಂಡಿದ್ದ ಮಹಾಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿ, 5 ವರ್ಷಗಳಿಂದ ವರಸಿದ್ಧಿ ವಿನಾಯಕ ಗೆಳೆಯರ ಬಳಗ ಗಣೇಶೋತ್ಸವ ಅಂಗವಾಗಿ ಮಹಾಪೂಜೆ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಅನ್ನ ಸಂತರ್ಪಣೆ ಕೈಗೊಳ್ಳುತ್ತಿರುವುದು ಎಲ್ಲರಿಗೂ ಮಾದರಿಯಾಗಿದೆ ಎಂದರು.

ಮಹಾಂತಯ್ಯ ತೆಗ್ಗಿನಮಠ ಮಾತನಾಡಿದರು. ಸದಾಶಿವಯ್ಯಶಾಸ್ತ್ರಿ ಪತ್ರಿಮಠ ಪೂಜೆ ನೆರವೇರಿಸಿದರು. ಮೃತ್ಯುಂಜಯ ಯರಗುದ್ದಿಮಠ, ಪಾಂಡಪ್ಪ ಇಂಚಲ, ಸೋಮಪ್ಪ ವಾಲಿ, ಶಿವಪ್ಪ ಲಿಂಬೆನ್ನವರ, ಬಸಪ್ಪ ಹುಲ್ಲಪ್ಪನವರ, ಸೋಮನಾಥ ಸೊಪ್ಪಿಮಠ, ವಿಠ್ಠಲ ಹಂಪಿಹೊಳಿ, ಪತ್ರಕರ್ತ ಈಶ್ವರ ಶಿಲ್ಲೇದಾರ, ಕುತುಬ್​ ರುದ್ರಾಪುರ, ಮಹಾಂತೇಶ ಪಾಟೀಲ, ಈರಯ್ಯ ತೆಗ್ಗಿನಮಠ, ಶ್ರೀಕಾರ ತೆಗ್ಗಿನಮಠ, ವಿಶ್ವನಾಥ ಹೊಸಮಠ, ಬಸವರಾಜ ಗೀರನವರ, ಆನಂದ ಲಿಂಬೆನ್ನವರ, ಶಂಕರ ಪಿರಗೋಜಿ, ವಿನೋದ ಗಿರೆನ್ನವರ, ಬಸವರಾಜ ಬೇವಿನಕೊಪ್ಪ, ಸಚಿನ ಬೆಳಗಾವಿ, ಶ್ರೀಶೈಲ ಹುಬ್ಬಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net