

ಸಿದ್ದಾಪುರ: ಗ್ರೀನ್ ಫೀಲ್ದ್ ಅಭ್ಯತ್ ಮಂಗಲ ಗ್ರಾಮದಲ್ಲಿ 15ನೇ ವರ್ಷದ ಅದ್ದೂರಿ ಗೌರಿ ಗಣೇಶ ವಿಸರ್ಜನೋತ್ಸವ ಸಂಭ್ರಮ ಸಡಗರದಿಂದ ಸೋಮವಾರ ರಾತ್ರಿ ನೆರವೇರಿತು.
ಅಭ್ಯತ್ ಮಂಗಲ ಗ್ರಾಮದ ವ್ಯದ್ಯನಾಧೇಶ್ವರ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಮೂರ್ತಿಯನ್ನು ವಿದ್ಯುತ್ ಅಲಂಕೃತ ಮಂಟಪದಲ್ಲಿ ಇರಿಸಿ ವಾದ್ಯ ಮೇಳಗಳೊಂದಿಗೆ ಮಂಗಳೂರಿನ ಹೆಸರಾಂತ ಹುಲಿವೇಷ ನೃತ್ಯ ತಂಡದವರ ಆಕರ್ಷಕ ಪ್ರದರ್ಶನದೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ತೆರಳಿ ಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು.
ವಿಸರ್ಜನೆ ಅಂಗವಾಗಿ ಮಹಾ ಪೂಜೆ, ಮಂಗಳಾರತಿ ಬಳಿಕ ನೆರೆದಿದ್ದ ಭಕ್ತಾದಿಗಳಿಗೆ ಅನ್ನಸಂತರ್ಪಣ ಕಾರ್ಯ ನಡೆಯಿತು. ಸಮಿತಿಯ ಅಧ್ಯಕ್ಷ ಮಿಥುನ್ ನಾರಾಯಣ, ಉಪಾಧ್ಯಕ್ಷ ಕೃಷ್ಣಪ್ಪ, ಪ್ರಮುಖರಾದ ರಾಜೇಶ್, ರಂಜಿತ್, ವಿನು, ಜೀವನ್ ಚೇತನ್ ಸೇರಿದಂತೆ ಸಮಿತಿಯ ಪ್ರಮುಖರು ಪಾಲ್ಗೊಂಡಿದ್ದರು.