ಆ.3 ರಿಂದ ಕೊಪ್ಪದಲ್ಲಿ ಗಣೇಶ-ದುರ್ಗಾ ಮಹೋತ್ಸವ

30Koppa01
Published on

ಕೊಪ್ಪ : ್ರೆಂಡ್ಸ್ ಸರ್ಕಲ್ ಗೆಳೆಯರ ಬಳಗದಿಂದ ಮಾರ್ಕೆಟ್ ರಸ್ತೆಯಲ್ಲಿ ಬಲಮುರಿ ವೀರ ಗಣಪತಿ ಮತ್ತು ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಅ.3ರಿಂದ 47ನೇ ವರ್ಷದ ವೈಭವದ ಶ್ರೀಗಣೇಶ-ದುರ್ಗಾ ಮಹೋತ್ಸವ ನಡೆಯಲಿದೆ ಎಂದು ್ರೆಂಡ್ಸ್ ಸರ್ಕಲ್ ಗೆಳೆಯರ ಬಳಗದ ಅಧ್ಯಕ್ಷ ಆಶೋಕ್‌ಶೆಟ್ಟಿ ತಿಳಿಸಿದರು.
ಆ.3ರಂದು ದುರ್ಗಾದೇವಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಸಂಜೆ ಡೆಸ್ಟಿನಿ ಸ್ಕೂಲ್ ಆ್ ಡ್ಯಾನ್ಸ್ ಇವರಿಂದ ನೃತ್ಯ ಸಂಭ್ರಮ, 4 ರಂದು ಬಿ.ಸಿ ರೋಡ್‌ನ ಪುರುಷೋತ್ತಮ ಕೋಯಿಲ ಸಾರಥ್ಯದಲ್ಲಿ ಪಂಡ ಕೇನುಜೆರ್ ತುಳು ನಾಟಕ,5ರಂದು ಉಡುಪಿಯ ಟೀಂ ್ರೇಂಡ್ಸ್ ಮೆಲೋಡಿಸ್‌ನಿಂದ ಆರ್ಕೆಸ್ಟ್ರಾ, 6ರಂದು ತುಳುನಾಡ ಮಾಣಿಕ್ಯ ಅರವಿಂದ್ ಬೋಳಾರ್ ಇವರಿಂದ ಒರಿಯಾಂಡಲ ಸರಿ ಬೋಡು ತುಳು ನಾಟಕ ಪ್ರದರ್ಶನವಾಗಲಿದೆ.
7ರಂದು ಬೆಳಗ್ಗೆ ಸಾಮೂಹಿಕ ಸತ್ಯನಾರಾಯಣ ಪ್ರತ, ಸಾರ್ವಜನಿಕ ಅನ್ನಸಂತರ್ಪಣೆ ಹಾಗೂ ಸಂಜೆ ಸಾನ್ವಿ ಭಟ್ ಇವರಿಂದ ಸಂಗೀತ ಸಂಜೆ, 8ರಂದು ಬೆಳಗ್ಗೆ ಸಾಮೂಜಿಕ ಕುಂಕುಮಾರ್ಚನೆ ಹಾಗೂ ಸಂಜೆ ರಿದಂ ಲೈವ್ ಆರ್ಕೆಸ್ಟ್ರಾ, 9ರಂದು ದೇವಿ ಪಾರಾಯಣ, ಸಂಜೆ ಸವಿನೆನಪು ಕಾರ್ಯಕ್ರಮ, 10 ರಂದು ಚಂಡಿಕಾ ಹೋಮ, ಬಾಗಿನ ಸೇವೆ, ಸಂಜೆ ಶ್ರೀಗಣಪತಿ ಮಂದಾರ್ತಿ ಯಕ್ಷಗಾನ ಮೇಳದವರಿಂದ ಕದಂಬ ಕೌಶಿಕ ಯಕ್ಷಗಾನ ಪ್ರದರ್ಶನ. 11ರಂದು ಆಯುಧ ಪೂಜೆ, ಸಂಜೆ ರಂಗಪೂಜೆ, ದೀಪೋತ್ಸವ, 12ರಂದು ಗಣೇಶ ದುರ್ಗಾ ವಿಸರ್ಜನಾ ಮಹೋತ್ಸವ ಜರುಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿಸರ್ಜನಾ ಮಹೋತ್ಸವದಲ್ಲಿ ಆಕರ್ಷಣೆಯಾಗಿ ಓಕುಳಿ, ಕೇರಳದ ತೈಯಂ ನೃತ್ಯ ಪ್ರದರ್ಶನ, ಮಂಗಳವಾದ್ಯ, ಚಂಡೆ ವಾದ್ಯ, ನಾಸಿಕ್ ಬ್ಯಾಂಡ್, ವಿವಿಧ ವೇಷ ಭೂಷಣ ಮತ್ತು ಸಿಡಿಮದ್ದು ಪ್ರದರ್ಶನದೊಂದಿಗೆ ರಾಜಬೀದಿ ಉತ್ಸವ ನಡೆಯಲಿದೆ. ನಂತರ ಗೌರಿಕೆರೆಯಲ್ಲಿ ವಿಸರ್ಜನೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂದೇಶ್ ಶೆಟ್ಟಿ, ಅರ್ಪಿತ್ ಕುಮಾರ್, ನಾಗರಾಜ್ ನಾಯಕ್, ಸತೀಶ್ ಪ್ರಭು ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net