

ವಿಜಯವಾಣಿ ಸುದ್ದಿಜಾಲ ಉಡುಪಿ
ಇಂದಿನ ಅನೇಕ ಪಾಲಕರು ಕೆಲಸದ ಒತ್ತಡದಿಂದಾಗಿ ಮಕ್ಕಳ ಪಾಲನೆಗೆ ಸಮಯಾವಕಾಶ ಇಲ್ಲದ್ದರಿಂದ ಅವರಿಗೆ ಮೊಬೈಲ್ ನೀಡತೊಡಗಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಅತಿಯಾಗಿ ಮೊಬೈಲ್ ಬಳಕೆಯಿಂದ ಮಕ್ಕಳಲ್ಲಿ ನಕಾರಾತ್ಮಕ ಧೋರಣೆ ಬೆಳೆಯುತ್ತದೆ. ಹೀಗಾಗಿ ಚಿತ್ರಕಲೆ, ಸಂಗೀತ, ನೃತ್ಯ ಮುಂತಾದ ಕಲೆಗಳಲ್ಲಿ ಮಕ್ಕಳನ್ನು ಆಸಕ್ತರನ್ನಾಗಿಸಬೇಕು. ವಿವಿಧ ಸ್ಪರ್ಧೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರಣೆ ನೀಡಬೇಕು ಎಂದು ಕೆನರಾ ಬ್ಯಾಂಕ್ ಮಣಿಪಾಲ ವೃತ್ತ ಕಚೇರಿಯ ಮಹಾ ಪ್ರಬಂಧಕ ಎಚ್.ಕೆ. ಗಂಗಾಧರ ಕರೆ ನೀಡಿದರು.
ಮಣಿಪಾಲದ ಸಿಂಡಿಕೇಟ್ ಬ್ಯಾಂಕ್ ಗೋಲ್ಡನ್ ಜ್ಯುಬಿಲಿ ಆಡಿಟೋರಿಯಂನಲ್ಲಿ ಕೆನರಾ ಬ್ಯಾಂಕ್ ಸಹಭಾಗಿತ್ವದಲ್ಲಿ ಮಣಿಪಾಲದ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗಾಗಿ ಆಗಸ್ಟ್ 17ರಂದು ಆಯೋಜಿಸಿದ್ದ ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಪ್ರೊ.ಕಮಲಾಕ್ಷ, ಜೈವಿಠ್ಠಲ, ಯು.ಜಗನ್ನಾಥ ದೇವಾಡಿಗ, ಕಿರಣ ನಾಯಕ, ಸಚಿನ್ ಶೆಟ್ಟಿ, ವಿಶಾಲ ಸಿಂಗ್, ಮೋಹನಕೃಷ್ಣ, ಅನಂತ ಶೇಟ್, ಕೃಷ್ಣಮೂರ್ತಿ ರಾವ್, ಬಲ್ಲಾಳ, ನರಸಿಂಹ ಮೂರ್ತಿ, ಉದಯ ಇತರರು ಉಪಸ್ಥಿತರಿದ್ದರು.
350ಕ್ಕೂ ಹೆಚ್ಚು ವಿದ್ಯಾರ್ಥಿಗಳು ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಜೀವನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.