ಮಹಾಗಣಪತಿ ಸೇವಾ ಸಮಿತಿಯಿಂದ ಪ್ರತಿಷ್ಠಾಪಿಸಿದ್ದ ಗಣೇಶ ವಿಸರ್ಜನೆ

06.1
Published on

ಹೊಳೆನರಸೀಪುರ : ಮಹಾಗಣಪತಿ ಸೇವಾ ಸಮಿತಿಯಿಂದ ಗಣೇಶ ಹಬ್ಬದಂದು ಪ್ರತಿಷ್ಠಾಪಿಸಿದ್ದ ಗಣೇಶೋತ್ಸವ ಶನಿವಾರ ಮುಕ್ತಾಯವಾಯಿತು. ಶನಿವಾರ ರಾತ್ರಿ ವಿದ್ಯುತ್ ದೀಪಾಲಂಕೃತ ಲಾರಿಯಲ್ಲಿ ಗಣೇಶನನ್ನು ಕೂರಿಸಿ ಮೆರವಣಿಗೆ ಮಾಡಲಾಯಿತು. ಭಾನುವಾರ ಮಧ್ಯಾಹ್ನ 2.30 ಕ್ಕೆ ಹೇಮಾವತಿ ನದಿಯಲ್ಲಿ ತೆಪ್ಪೋತ್ಸವ ನೆಡೆಸಿ ಗಣೇಶನನ್ನು ವಿಸರ್ಜಿಸಲಾಯಿತು.


ಗಣೇಶ ಮೂರ್ತಿಯನ್ನು ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಲಾಗಿತ್ತು. ಈಶ್ವರ, ಸರಸ್ವತಿ, ಬಾಲ ರಾಮಮಂದಿರ, ಟ್ಯಾಬ್ಲೋಗಳು, ಡೊಳ್ಳುಕುಣಿತ, ವೀರಗಾಸೆ ಕುಣಿತ, ಚಂಡೆ ವಾಧ್ಯ, ಬೊಂಬೆ ಕುಣಿತ, ಕೀಲು ಕುದುರೆ, ತಮಟೆ ಮೇಳದ ಜತೆಯಲ್ಲಿ ಹೌಸಿಂಗ್ ಬೋರ್ಡ್, ಅಂಬೇಡ್ಕರ್ ನಗರ, ಹಾಸನ ಮೈಸೂರು ರಸ್ತೆಯಲ್ಲಿ ಸಾಗಿ ಅಂಬೇಡ್ಕರ್ ವೃತ್ತದ ಮೂಲಕ ಮೆರವಣಿಗೆ ಸಾಗಿತು.


ಭಾವಕೈತೆ ಮೆರೆದ ಮುಸ್ಲಿಂ ಯುವಕರು : ಮೆರವಣಿಗೆ ರಿವರ್ ಬ್ಯಾಂಕ್ ರಸ್ತೆಗೆ ಬರುತ್ತಿದ್ದಂತೆ ಅಲ್ಲಿನ ಮುಸ್ಲಿಂ ಯುವಕರು ಮೆರವಣಿಗೆಯಲ್ಲಿ ಭಾಗವಹಿಸಿದರು. ಖಾಲಿದ್, ರಿಯಾಸ್, ಫೈರೋಸ್, ವಸೀಮ್, ಜಬೀರ್, ಮುನೀರ್ ನೇತೃತ್ವದಲ್ಲಿ ಜ್ಯೂಸ್ ನೀಡಿ, ಅವರೂ ಕೂಡ ಮೆರವಣಿಗೆಯಲ್ಲಿ ಸಾಗಿ ಭಾವೈಕ್ಯತೆ ಮೆರೆದರು.


ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಸುಚೇತಾ, ವೃತ್ತ ನಿರೀಕ್ಷಕ ಪ್ರದೀಪ್, ನಗರಠಾಣೆ ಎಸ್.ಐ.ಅಭಿಜಿತ್ ನೇತೃತ್ವದಲ್ಲಿ 300 ಕ್ಕೂ ಹೆಚ್ಚು ಪೊಲೀಸರನ್ನು ಬಂದೋಬಸ್ತ್ ಕಾರ್ಯಕ್ಕೆ ನಿಯೋಜಿಸಲಾಗಿತ್ತು. ಮೆರವಣಿಗೆಯ ಸಂಪೂರ್ಣ ಚಿತ್ರೀಕರಣಕ್ಕಾಗಿ 10 ಕ್ಕೂ ಹೆಚ್ಚು ವಿಡಿಯೋ ಗ್ರಾಫರ್‌ಗಳನ್ನು ನೇಮಿಸಲಾಗಿತ್ತು.


ಸಮಿತಿಯ ಗೌರವಾಧ್ಯಕ್ಷ ಟಿ.ಶಿವಕುಮಾರ್, ಕಾರ್ಯಾಧ್ಯಕ್ಷ ಎಚ್.ಎಸ್.ಪುಟ್ಟಸೋಮಪ್ಪ, ಪುರಸಭಾಧ್ಯಕ್ಷ ಕೆ.ಶ್ರೀಧರ್, ಪುರಸಭೆ ಮುಖ್ಯಾಧಿಕಾರಿ ನಾಗೇಂದ್ರಕುಮಾರ್, ಸಮಿತಿಯ ಎಸ್.ಗೋಕುಲ್, ಡಿಶ್ ಗೋವಿಂದ, ನಿವೃತ್ತ ಸೈನಿಕ ಮೀಸೆ ಈಶ್ವರ್, ನರಸಿಂಹಶೆಟ್ಟಿ, ಕಾದಲನ್ ಕೃಷ್ಣ, ಮಂಜುನಾಥ್, ಶಂಕರ್ ನಾರಾಯಣ್ ಏತಾಳ್, ಸ್ಟುಡಿಯೋ ಅಶೋಕ್, ಆರ್.ಬಿ.ಪುಟ್ಟೇಗೌಡ, ಪುರಸಭಾ ಸದಸ್ಯರಾದ ಎ.ಜಗನ್ನಾಥ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ವೈ.ಚಂದ್ರಶೇಖರ್, ಗಾಂಧಿನಗರ ಕುಮಾರ್, ಜವರೇಶ, ಎಚ್.ಬಿ. ಈಶ್ವರ್, ಎಚ್.ಎಸ್. ಸುದರ್ಶನ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಆರ್.ಮಂಜುನಾಥ್, ಪುರಸಭೆ ಮಾಜಿ ಅಧ್ಯಕ್ಷ ಲಕ್ಷ್ಮಣ, ಮುರಳೀಧರ್ ಗುಪ್ತಾ, ಶಿವಕುಮಾರ್, ವೈ.ವಿ. ಚಂದ್ರಶೇಖರ್ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net