ಗೋಕರ್ಣದಲ್ಲಿ ಗಣೇಶ ವಿಸರ್ಜನೆ

22gkn2-a-
Published on

ಗೋಕರ್ಣ: ಗಣೇಶ ಹಬ್ಬದ ನಿಮಿತ್ತ ಮನೆ ಮನೆಗಳಲ್ಲಿ ಪ್ರತಿಷ್ಠಾಪಿಸಿ ಪೂಜಿಸಲಾದ ಗಣೇಶ ಮೂರ್ತಿಗಳನ್ನು ಶುಕ್ರವಾರ ಸಂಜೆ ಸಂಭ್ರಮದಿಂದ ಆಕರ್ಷಕ ವಾದ್ಯಮೇಳಗಳೊಂದಿಗೆ ಸಾಮೂಹಿಕ ಮೆರವಣಿಗೆಯಲ್ಲಿ ಸಾಗಿ ಸಮುದ್ರದಲ್ಲಿ ವಿಸರ್ಜಿಸಲಾಯಿತು.

ಸಂಜೆ ಐದು ಗಂಟೆಯಿಂದ ಮನೆಗಳಲ್ಲಿನ ಗಣೇಶ ಮೂರ್ತಿಗಳನ್ನು ರಥಬೀದಿಗೆ ತಂದು ಸಾಲಿನಲ್ಲಿ ಕೂಡ್ರಿಸಲಾಯಿತು. ಶ್ರೀ ಮಹಾಬಲೇಶ್ವರ ಮಂದಿರದಲ್ಲಿ ಸ್ಥಾಪಿಸಲಾದ ಗಣೇಶಮೂರ್ತಿ ಉತ್ಸವದಲ್ಲಿ ಬಂದು ರಥಬೀದಿಯ ಶ್ರೀ ದೇವರ ಪೌಳಿಯಲ್ಲಿ ಮಂಗಳಾರತಿ ಸ್ವೀಕರಿಸಿ ತೆರಳಿತು. ಶ್ರೀ ಮಹಾಬಲೇಶ್ವರ ಮಂದಿರದ ಈ ಉತ್ಸವವನ್ನು ಅನುಸರಿಸಿ ಊರಿನ ಒಂದೂವರೆ ಸಾವಿರಕ್ಕೂ ಅಧಿಕ ಮನೆಗಳಲ್ಲಿ ಪೂಜಿಸಲಾದ ಮೂರ್ತಿಗಳು ಸರತಿ ಸಾಲಿನಲ್ಲಿ ಸಮುದ್ರಕ್ಕೆ ನಡೆದವು. ಅಲ್ಲಿ ಪ್ರಥಮವಾಗಿ ಮಹಾಬಲೇಶ್ವರ ಮಂದಿರದ ಗಣೇಶನನ್ನು ಸಮುದ್ರಕ್ಕೆ ಸಮರ್ಪಿಸಿದ ನಂತರ ಉಳಿದ ಮೂರ್ತಿಗಳ ವಿಸರ್ಜನೆ ಸಾಂಗವಾಗಿ ನೆರವೇರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net