

ಮಂಗಳೂರು: ಸಾರ್ವಜನಿಕ ಗಣೇಶೋತ್ಸವ ಆಯೋಜಕರು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ನೀಡಿದ ನಿರ್ದೇಶನಗಳನ್ನು ಚಾಚು ತಪ್ಪದೆ ಪಾಲಿಸಬೇಕು. ಉತ್ಸವಗಳನ್ನು ಯಶಸ್ವಿಯಾಗಲು ಜಿಲ್ಲಾಡಳಿತದಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.
ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಗಣೇಶೋತ್ಸವ ಸಂದರ್ಭ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಅಧಿಕಾರಿಗಳು ಹಾಗೂ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮಗಳಿಗೆ ಈಗಾಗಲೇ ಜಿಲ್ಲೆಯಾದ್ಯಂತ ಸಿದ್ಧತೆಗಳು ಆರಂಭಗೊಂಡಿದ್ದು, ಉತ್ಸವಗಳಿಗೆ ಏಕಗವಾಕ್ಷಿ(ಸಿಂಗಲ್ ವಿಂಡೋ) ಯಡಿ ಅನುಮತಿ ನೀಡಬೇಕು. ಜಿಲ್ಲೆಯಲ್ಲಿ ಉತ್ಸವಗಳು ಈ ಹಿಂದಿನಂತೆ ಸುಸೂತ್ರವಾಗಿ ನಡೆಸಲು ಯಾವುದೇ ತೊಂದರೆಯಿಲ್ಲ. ಉತ್ಸವಕ್ಕೆ ಸಂಘಟಕರು ಗ್ರಾಮೀಣ ಭಾಗದಲ್ಲಾದರೆ ಪಂಚಾಯಿತಿ ಅಥವಾ ಸ್ಥಳೀಯ ಸಂಸ್ಥೆಗಳು, ನಗರ ಭಾಗದಲ್ಲಾದರೆ ಮಹಾನಗರಪಾಲಿಕೆಗೆ ಅರ್ಜಿ ಸಲ್ಲಿಸಬೇಕು. ಧ್ವನಿವರ್ಧಕ ಅಳವಡಿಕೆಗೆ ಆಯಾಯ ಪೊಲೀಸ್ ಠಾಣೆಗಳು ಅನುಮತಿ ನೀಡಬೇಕು ಎಂದರು.
ಪರಿಸರಕ್ಕೆ ಯಾವುದೇ ರೀತಿಯಲ್ಲೂ ಧಕ್ಕೆಯಾಗದಂತೆ ಸುರಕ್ಷತೆಯನ್ನು ಗಮನಿಸಿ ಉತ್ಸವಗಳು ನಡೆಯಬೇಕು. ಕರಾವಳಿಯಲ್ಲಿ ಆವೆಮಣ್ಣಿನಿಂದಲೇ ಗಣಪತಿ ತಯಾರಿಸುವುದು ಸ್ವಾಗತಾರ್ಹವಾಗಿದ್ದು, ಯಾವುದೇ ಕಾರಣಕ್ಕೂ ಪ್ಲಾಸ್ಟರ್ ಆ್ ಪ್ಯಾರಿಸ್ ಗಣಪತಿ ಪೂಜಿಸುವಂತಿಲ್ಲ. ನೇತ್ರಾವತಿ, ಲ್ಗುಣಿ ಸೇರಿದಂತೆ ವಿವಿಧ ನದಿ, ಕೆರೆಗಳಲ್ಲಿ ಗಣಪತಿ ವಿಸರ್ಜನೆ ಮಾಡಲಾಗುತ್ತಿದೆ. ಆ ಸ್ಥಳದಲ್ಲಿ ಬೋಟ್, ಸುವ್ಯವಸ್ಥಿತ ಲೈಟಿಂಗ್, ಲ್ೈ ಜಾಕೆಟ್ ಸೇರಿದಂತೆ ಸುರಕ್ಷತೆ ಕಡೆಯೂ ಗಮನಹರಿಸಬೇಕು ಎಂದರು.
ಉತ್ಸವ ಸಂದರ್ಭ ಪೆಂಡಲ್‌ಗಳ ಸುತ್ತ ತ್ಯಾಜ್ಯ ವಿಲೇವಾರಿಗೆ ಕ್ರಮಕೈಗೊಳ್ಳಬೇಕು, ಅಗ್ನಿ ಸುರಕ್ಷತಾ ಕ್ರಮಕೈಗೊಳ್ಳಬೇಕು, ಮೆರವಣಿಗೆ ಹಾದು ಹೋಗುವ ರಸ್ತೆಯಲ್ಲಿ ಉತ್ತಮ ದಾರಿದೀಪ, ಬೆಳಕಿನ ವ್ಯವಸ್ಥೆಯನ್ನು ನೋಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಶಬ್ಧ ಮಾಲಿನ್ಯವಾಗದಂತೆ ಕ್ರಮ ವಹಿಸುವುದು, ಗಣೇಶೋತ್ಸವದ ಸಂದರ್ಭ ಹೆಚ್ಚು ಜನ ಸೇರುವಲ್ಲಿ ಸಮರ್ಪಕ ಬೆಳಕಿನ ವ್ಯವಸ್ಥೆ, ಆ್ಯಂಬುಲೆನ್ಸ್‌ಗಳು ಸನ್ನದ್ಧವಾಗಿರುವಂತೆ ಹಾಗೂ ವಿಸರ್ಜನೆ ಸಂದರ್ಭ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಗಮನ ಹರಿಸುವಂತೆ ಅಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಹಲವು ವರ್ಷಗಳಿಂದಲೂ ಸಾರ್ವಜನಿಕವಾಗಿ ಪಿಒಪಿ ಗಣಪನ ಮೂರ್ತಿಗಳನ್ನು ಬಳಸುವುದು ಕಂಡು ಬಂದಿಲ್ಲ. ಹಾಗಿದ್ದರೂ ಸ್ಥಳೀಯಾಡಳಿತ ಈ ಬಗ್ಗೆ ನಿಗಾ ವಹಿಸುತ್ತಿವೆ ಎಂದರು.
ಗಣೇಶೋತ್ಸವದ ಮೆರವಣಿಗೆಯ ಸಂದರ್ಭದಲ್ಲಿ ಬಳಸುವ ವಾಹನಗಳು ಕಾರ್ಯಕ್ಷಮತೆಯನ್ನು ಪ್ರಾದೇಶಿಕ ಸಾರಿಗೆ ಇಲಾಖೆಯವರು ಪರಿಶೀಲಿಸಬೇಕು ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಸಲಹೆ ನೀಡಿದರು.
ಸಭೆಯಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ್ ಕೆ., ಮನಪಾ ಆಯುಕ್ತ ಆನಂದ್ ಸಿ.ಎಲ್., ಡಿಸಿಪಿ ಸಿದ್ಧಾರ್ಥ್ ಗೋಯಲ್ ಮೊದಲಾದವರು ಉಪಸ್ಥಿತರಿದ್ದರು.