

ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ಗಣೇಶ ಚತುರ್ಥಿ ಸಂಭ್ರಮ ಮನೆ ಮಾಡಿದ್ದು ಹಬ್ಬಕ್ಕೆ ಮೊದಲ ದಿನ ಮಣ್ಣಿನ ಮೂರ್ತಿಗಳು ಮತ್ತು ಅಗತ್ಯ ವಸ್ತುಗಳ ಭರ್ಜರಿ ವ್ಯಾಪಾರ, ಪ್ರತಿಷ್ಠಾಪನಾ ಸ್ಥಳಗಳಿಗೆ ಖರೀದಿಯ ಗಣಪನ ಸಾಗಾಣೆಯ ದೃಶ್ಯಗಳು ಕಂಡು ಬಂದವು.
ಹೆಚ್ಚಿನ ವ್ಯಾಪಾರದ ನಿರೀಕ್ಷೆಯಲ್ಲಿ ಮಾರಾಟಗಾರರು ಲಕ್ಷಾಂತರ ರೂ ಬಂಡವಾಳ ಹೂಡಿ, ಮಣ್ಣಿನ ಸಾವಿರಾರು ಗಣೇಶ ಮಣ್ಣಿನ ಮೂರ್ತಿಗಳನ್ನು ತರಿಸಿ, ಮಾರಾಟಕ್ಕಿಟ್ಟಿದ್ದಾರೆ. ಬುಕ್ಕಿಂಗ್ ಮಾಡಿದ್ದ ನಾನಾ ಬಗೆಯ ಗಣಪನನ್ನು ವಿವಿಧ ಮಹೋತ್ಸವ ಸಮಿತಿಗಳು ಶುಕ್ರವಾರ ಸಂಜೆಯೇ ನಿಗದಿತ ಸ್ಥಳಗಳಿಗೆ ಸಾಗಿಸಿದ್ದು ಹಬ್ಬದ ಆಚರಣೆಗೆ ಸಿದ್ಧತೆಗಳು ಜೋರಾಗಿವೆ. ಮತ್ತೊಂದೆಡೆ ಅಲ್ಲಲ್ಲಿ ಸ್ಥಳಿಯ ರಾಜಕಾರಣಿಗಳು ಹಾಗೂ ಸಮಾಜ ಸೇವಕರು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಯುವಕರ ಬಳಗಳಿಗೆ ಉಚಿತವಾಗಿ ಗಣಪತಿ ಮೂರ್ತಿಗಳನ್ನು ವಿತರಿಸಿದ್ದಾರೆ.
*ತಾತ್ಕಾಲಿಕ ಹೊಂಡಗಳ ನಿರ್ಮಾಣ!
ಕೆರೆ, ಬಾವಿಗಳ ಬದಲಿಗೆ ಸ್ಥಳಿಯ ಆಡಳಿತ ಸಂಸ್ಥೆಗಳು ನಿರ್ಮಿಸಿರುವ ಹೊಂಡಗಳಲ್ಲಿ ಗಣಪತಿ ಮೂರ್ತಿ ವಿಸರ್ಜನೆಗೆ ಕ್ರಮ ಕೈಗೊಳ್ಳಲಾಗಿದೆ.
ಜಿಲ್ಲಾ ಕೇಂದ್ರದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಧರ್ಮರಾಯನ ಕೆರೆಯನ್ನು ಗುರುತಿಸಿದ್ದು ಬ್ಯಾರಿಕೇಡುಗಳನ್ನು ಹಾಕಲಾಗಿದೆ. ದೈವ ಕಾರ್ಯದ ವೇಳೆ ಯಾವುದೇ ಅವಡಗಳು ಸಂಭವಿಸದಿರಲು ಸುರಕ್ಷತಾ ದೃಷ್ಟಿಯಿಂದ ಸಿಬ್ಬಂದಿ ನಿಯೋಜಿಸಲಾಗಿದೆ.
*ನಿಯಮ ಪಾಲನೆಯ ನಿಗಾ
ಈಗಾಗಲೇ ಜಿಲ್ಲಾದ್ಯಂತ ಸಾರ್ವಜನಿಕ ಗಣಪತಿ ಪ್ರತಿಷ್ಠಾಪನಾ ವಿವಿಧ ಸಮಿತಿಗಳು ಗಣೇಶನ ಹಬ್ಬದ ಅದ್ದೂರಿ ಆಚರಣೆಗೆ ಸಿದ್ಧತೆಗಳನ್ನು ಕೈಗೊಳ್ಳುತ್ತಿರುವುದರ ನಡುವೆ ಪೊಲೀಸ್ ಇಲಾಖೆಯು ಹಲವು ನಿಯಮಗಳನ್ನು ಪಾಲಿಸಲು ಸೂಚಿಸಿದೆ. ಹಬ್ಬದ ಆಚರಣೆ ನೆಪದಲ್ಲಿ ಅಹಿತಕರ ಟನೆಗಳು ಮತ್ತು ರ್ನಿಲಕ್ಷದಿಂದ ಪ್ರಾಣಹಾನಿ ಸಂಭವಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ರ್ನಿದಿಷ್ಟ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇಲ್ಲದಿದ್ದಲ್ಲಿ ನಿರ್ದಾಣ್ಯ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದೆ.
*ಅನುಮತಿಗೆ ಅರ್ಜಿ ಸಲ್ಲಿಕೆ
ಸಾರ್ವಜನಿಕ ಪ್ರದೇಶದಲ್ಲಿ ಗಣೇಶ ಪ್ರತಿಷ್ಠಾಪಿಸುವ ವಿವಿಧ ಸಂಟನೆ ಮುಖಂಡರು ಪೊಲೀಸ್, ಬೆಸ್ಕಾಂ, ನಗರಸಭೆಯನ್ನೊಳಗೊಂಡ ಏಕಗವಾ ಕೇಂದ್ರಕ್ಕೆ ಅರ್ಜಿ ಸಲ್ಲಿಸಿ, ಅನುಮತಿ ಪಡೆದುಕೊಂಡಿದ್ದಾರೆ.
ಸಾರ್ವಜನಿಕ ಪ್ರದೇಶಗಳಲ್ಲಿ ಗಣೇಶ ಪ್ರತಿಷ್ಠಾಪನೆ, ಧ್ವನಿವರ್ಧಕ, ವಿದ್ಯುತ್ ದೀಪಾಲಂಕಾರ, ಮೆರವಣಿಗೆಗೆ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಆದರಿಂದ ಅನುಮತಿಗಾಗಿ ಅರ್ಜಿ ಸಲ್ಲಿಸಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿರುವ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಏಕಗಾವಕ್ಷಿ ಕೇಂದ್ರವನ್ನು ತೆರೆಯಲಾಗಿತ್ತು. ಹಬ್ಬಕ್ಕೆ ಎರಡು ಒಂದು ದಿನ ಬಾಕಿ ಇರುವ ಹಿನ್ನೆಲೆಯಲ್ಲಿ ಶುಕ್ರವಾರ ಅನುಮತಿಗಾಗಿ ಅರ್ಜಿ ಸಲ್ಲಿಸಲು ಸಾಲು ಗಟ್ಟಿ ನಿಂತಿದ್ದರು.