

ಕುಕನೂರು: ಗಣೇಶ ಹಾಗೂ ಈದ್ ಮಿಲಾದ್ ಹಬ್ಬವನ್ನು ಶಾಂತಿಯುತ ಹಾಗೂ ಪರಿಸರಕ್ಕೆ ಹಾನಿಯಾಗದಂತೆ ಆಚರಿಸುವಂತೆ ಡಿವೈಎಸ್ಪಿ ಶರಣಪ್ಪ ಸುಬೇದಾರ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬ ಆಚರಣೆಯ ಕುರಿತು ಶಾಂತಿ ಸಭೆಯಲ್ಲಿ ಗುರುವಾರ ಮಾತನಾಡಿದರು.
ಹಬ್ಬಗಳ ಆಚರಣೆಯಲ್ಲಿ ಕೆಲವರು ವೈಯಕ್ತಿಕ ದ್ವೇಷದಿಂದ ಗಲಾಟೆ ಮಾಡುತ್ತಾರೆ. ಯುವಕರು ಗಣೇಶ ಚತುರ್ಥಿಯನ್ನು ಶಾಂತಿಯುತವಾಗಿ ಆಚರಿಸಬೇಕು. ಗಣೇಶ ವಿಸರ್ಜನೆ ವೇಳೆ ಡಿಜೆ ಹಚ್ಚುವುದನ್ನು ನಿಷೇಧಿಸಲಾಗಿದೆ. ಸಾಂಪ್ರದಾಯಿಕ ಮಜಲುಗಳ ಮೂಲಕ ವಿಸರ್ಜನೆ ಮಾಡಬೇಕು ಎಂದರು.
ಸಿಪಿಐ ಮೌನೇಶ್ ಪಾಟೀಲ್ ಮಾತನಾಡಿ, ಕಾನೂನಿಗಿಂತ ಯಾರು ದೊಡ್ಡವರಿಲ್ಲ. ಅಹಿತಕರ ಘಟನೆಗಳು ನಡೆಯದಂತೆ ಜಾಗೃತಿ ವಹಿಸಬೇಕು. ಎಲ್ಲರೂ ಕೆಇಬಿ, ಅಗ್ನಿಶಾಮಕ, ಪಪಂ ಹಾಗೂ ಪೊಲೀಸ್ ಇಲಾಖೆಯಿಂದ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಪರವಾನಿಗೆ ತರಬೇಕು ಎಂದು ತಿಳಿಸಿದರು.
ಪಿಎಸ್‌ಐ ಟಿ.ಗುರುರಾಜ ಮಾತನಾಡಿದರು. ಜೆಸ್ಕಾಂ ಅಧಿಕಾರಿ ಶರಣಪ್ಪ ಉಪ್ಪಾರ, ವೈದ್ಯೆ ಪ್ರಿಯಾಂಕ ಕಂಪ್ಲಿ, ಅಗ್ನಿಶಾಮಕ ಅಧಿಕಾರಿ ಜನಾರ್ದನರಾವ್,ಪ್ರೋಬೆಷನರಿ ಡಿವೈಎಸ್ಪಿ ರವಿಕುಮಾರ, ತನಿಖಾ ಪಿಎಸ್‌ಐ ಕಾಶೀನಾಥ, ಗೃಹ ರಕ್ಷಕದಳ ವೀರಣ್ಣ ಬಡಿಗೇರ ಮುಖಂಡರಾದ ರಶೀದ್‌ಸಾಬ ಉಮಚಗಿ, ಈಶಪ್ಪ ಸಬರದ, ಹನುಮಂತಪ್ಪ ರ‌್ಯಾವಣಕಿ, ಶರಣಪ್ಪ ಚಲವಾದಿ, ಅಂದಪ್ಪ ಹುರುಳಿ, ರಶೀದ್‌ಸಾಬ ಹಣಜಗಿರಿ, ಪೊಲೀಸ್ ಸಿಬ್ಬಂದಿಗಳಾದ ಶರಣಪ್ಪ ಗೂಳರಡ್ಡಿ, ಮಾರುತಿ ನರೇಗಲ್, ಮಂಜುನಾಥ, ಗೋವಿಂದ್‌ರಾಜ ಭಜಂತ್ರಿ ಇತರರಿದ್ದರು.