

ನಿಪ್ಪಾಣಿ: ಸ್ಥಳೀಯ ವಿಎಸ್‌ಎಂ ಸೋಮಶೇಖರ ಆರ್.ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯ ಆವರಣದಲ್ಲಿ ಬುಧವಾರ ಗಣೇಶ, ಶಾಕಾಂಬರಿ, ಶನಿದೇವ, ಹನುಮಾನ, ದತ್ತಾತ್ರೇಯ, ಹಾಲಸಿದ್ಧನಾಥ, ಶಿವಲಿಂಗ ಮೂರ್ತಿಗಳ ಪ್ರಾಣಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು.
ನಿಡಸೋಸಿಯ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಆಡಿಯ ದತ್ತಾತ್ರೇಯ ಮಂದಿರದ ಪರಮಾತ್ಮರಾಜ ಮಹಾರಾಜರು, ಸಂಪಾದನಾ ಚರಮೂರ್ತಿಮಠದ ಸಂಪಾದನಾ ಸ್ವಾಮೀಜಿ, ಖಡಕಲಾಟದ ಅಪ್ಪನವರ ಕುಮಾರೇಶ್ವರ ವಿರಕ್ತಮಠದ ಶಿವಬಸವ ಸ್ವಾಮೀಜಿ, ವಿರೂಪಾಕ್ಷಲಿಂಗ ಸಮಾಧಿಮಠದ ಪ್ರಾಣಲಿಂಗ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕಳಸಾರೋಹಣ ನಡೆಯಿತು.
ವಿಎಸ್‌ಎಂ ನಿರ್ದೇಶಕ ರುದ್ರಕುಮಾರ ಕೋಠಿವಾಲೆ, ಬುಡಾ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಮಾಜಿ ಸಚಿವ ಎ.ಬಿ.ಪಾಟೀಲ, ಮಾಜಿ ಸಂಸದ ರಮೇಶ ಕತ್ತಿ, ಮಾಜಿ ಶಾಸಕ ಸುಭಾಷ ಜೋಶಿ, ಉತ್ತಮ ಪಾಟೀಲ, ಅಭಿನಂದನ ಪಾಟೀಲ, ಹಾಲಸಿದ್ಧನಾಥ ಸಹಕಾರ ಸಕ್ಕರೆ ಕಾರ್ಖಾನೆ ಚೇರ್ಮನ್ ಮಲಗೊಂಡಾ ಪಾಟೀಲ, ಸಂಚಾಲಕ ವಿಶ್ವನಾಥ ಕಮತೆ, ಅಪ್ಪಾಸಾಹೇಬ ಜೊಲ್ಲೆ, ಪ್ರಕಾಶ ಶಿಂಧೆ, ಚಿದಾನಂದ ಕೋರೆ ಸಹಕಾರ ಸಕ್ಕರೆ ಕಾರ್ಖಾನೆ ಚೇರ್ಮನ್ ಮಲ್ಲಿಕಾರ್ಜುನ ಕೋರೆ, ವಿಎಸ್‌ಎಂ ಅಧ್ಯಕ್ಷ ಚಂದ್ರಕಾಂತ ತಾರಳೆ, ಉಪಾಧ್ಯಕ್ಷ ಅಭಿಯಂತ ಸುನೀಲ ಪಾಟೀಲ, ಭರತೇಶ ಬನವಣೆ, ನಗರಸಭೆ ಸದಸ್ಯ ರಾಜೇಂದ್ರ ಗುಂದೇಶಾ, ಜಯವಂತ ಭಾಟಲೆ, ಅಶೋಕಕುಮಾರ ಅಸೋದೆ, ರಾಜು ಪವಾರ, ಸುಪ್ರಿಯಾ ಪಾಟೀಲ, ಸುನೀಲ ಪಾಟೀಲ, ಶರದ ಕವಟಗಿಮಠ, ಅಜಯ ಕವಟಗಿಮಠ, ಇತರರಿದ್ದರು.