

ಹುಬ್ಬಳ್ಳಿ: ಇಲ್ಲಿಯ ತಾರಿಹಾಳ ಶೃತಿನಗರದಲ್ಲಿ ಶ್ರೀ ವರಸಿದ್ಧಿವಿನಾಯಕ ದೇವಸ್ಥಾನದ ನೂತನ ಕಟ್ಟಡದ ಉದ್ಘಾಟನೆ ಮತ್ತು ಮೂತಿರ್ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಫೆ. 11ರಿಂದ ಮೂರು ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಬೆಳಗ್ಗೆ 8ಕ್ಕೆ ಮೂತಿರ್ ಮೆರವಣಿಗೆಯು 101 ಕುಂಭೋತ್ಸವ, ಕರಡಿ ಮಜಲು, ಜಗ್ಗಲಗಿ, ಭಜನಾ ಮೇಳಗಳ ವಾದ್ಯವೈಭವದಿಂದ ಗ್ರಾಮದಲ್ಲಿ ನಡೆಯಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ ಜರುಗುವುದು.
ಫೆ. 12ರಂದು ಬೆಳಗ್ಗೆ ಗಂಗಾಪೂಜೆ, ಗೋಪೂಜೆ ವಿವಿಧ ಕಾರ್ಯಕ್ರಮಗಳು, 13ರಂದು ಬೆಳಗ್ಗೆ ಹೋಮ ಹವನಗಳು ನಂತರ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದೆ. ಶ್ರೀಗಳ ಆಶೀರ್ವಚನ, ಅನ್ನಸಂತರ್ಪಣೆಗಳು ನಡೆಯಲಿವೆ.
ಎರಡೆತ್ತಿನಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ರುದ್ರಾಮಠದ ಶ್ರೀ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.