

ತುಮಕೂರು: ಸಂಜೆ ತುಂತುರ ಹನಿಯ ನಡುವೆಯೇ ಮುಂಗಾರು ಮಳೆ ಹುಡಗ, ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬಹು ನಿರೀಕ್ಷಿತ ಕೃಷ್ಣಂ ಪ್ರಣಯ ಸಖಿಯ ಚಿತ್ರದ 3ನೇ ಹಾಡು ಬಿಡುಗಡೆಗೊಂಡಿದ್ದು ವಿಶೇಷವಾಗಿತ್ತು. ತುಮಕೂರಿನ ವಿದ್ಯಾವಾಹಿನಿ ಪ್ರಥಮದರ್ಜೆ ಕಾಲೇಜು ಹಬ್ಬ ವಿವಿಯನ್ ವೈಭವ್ ವೇದಿಕೆಯಲ್ಲಿ ಶುಕ್ರವಾರ ಸಂಜೆ ಗಣೇಶ್, ನಟಿ ಮಾಳವಿಕಾ ನಾಯರ್ ಕಾಣಿಸಿಕೊಳ್ಳುತ್ತಿದ್ದಂತೆ ಕಾಲೇಜು ಹುಡಗರ ಜೋಶ್ ಮುಗಿಲು ಮುಟ್ಟಿತ್ತು.
ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಈ ಚಿತ್ರದ ಹಾಡುಗಳು ಸಾಕಷ್ಟು ಸದ್ದು ಮಾಡಿದ್ದು "ಚಿನ್ನಮ್ಮ ಚಿನ್ನಮ್ಮ' ಹಾಡು ಎಲ್ಲೆಡೆ ಅನುರಣಿಸುತ್ತಿದೆ. ಈ ಸಂದರ್ಭದಲ್ಲಿ ಇಡೀ ಚಿತ್ರ ತಂಡ ಭಾಗಿಯಾಗಿತ್ತು. ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕೆ.ಬಿ.ಜಯಣ್ಣ, ಎನ್.ಬಿ.ಪ್ರದಿಪ್ ಕುಮಾರ್, ತುಮಕೂರು ವಿವಿ ಕುಲಸಚಿವೆ ನಾಹಿದಾ ಜಮ್ ಜಮ್ ಇದ್ದರು.
ಆಗಸ್ಟ್ 15ಕ್ಕೆ ತೆರೆಗೆ : ಆಗಸ್ಟ್ 15ಕ್ಕೆ ಸಿನಿಮಾ ತೆರೆಗೆ ಬರಲಿದೆ. ಶ್ರೀನಿವಾಸ ರಾಜು ಚಿತ್ರ ನಿರ್ದೇಶಿದ್ದು ದೊಡ್ಡ ತಾರಾ ಬಳಗವೇ ಇದೆ. ಮಾಳವಿಕಾ ನಾಯರ್ ನಾಯಕಿಯಾಗಿ ಗಮನಸೆಳೆದಿದ್ದಾರೆ. ರಂಗಾಯಣ ರು, ಸಾಧುಕೋಕಿಲ , ಶಿನಿವಾಸ್ಮೂರ್ತಿ, ಶರಣ್ಯಾ ಶೆಟ್ಟಿ ಒಳಗೊಂಡ ಬಹುದೊಡ್ಡ ತಾರಾಗಣ ಒಳಗೊಂಡಿರುವ ಗಣೇಶ್ ಬಿಗ್ ಬಜೆಟ್ ಚಿತ್ರ ಇದಾಗಿದೆ. ಚಿತ್ರದಲ್ಲಿದೆ. ತಿಶ್ರೂಲ್ ಎಂಟರ್ಟೇನ್ಮೆಂಟ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣ ಜವಾಬ್ದಾರಿ ಪ್ರಶಾಂತ್ ರುದ್ರಪ್ಪ ಅವರದ್ದಾಗಿದೆ.
ಇದೇ ವೇದಿಕೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳ ಡೊಳ್ಳುಕುಣಿತ, ವೀರಗಾಸೆ, ಭರತನಾಟ್ಯ ಸೇರಿದಂತೆ 50ಕ್ಕೂ ಹೆಚ್ಚು ಕಾರ್ಯಕ್ರಮಗಳ ರಸದೌತಣವನ್ನು ವಿದ್ಯಾವಾಹಿನಿ ವಿದ್ಯಾರ್ಥಿಗಳು ಉಣಬಡಿಸಿದರು.