ಸಂಘಟನೆಗೆ ಗಣೇಶ ಮಹೋತ್ಸವ ಸಹಕಾರಿ

23KDR5
Published on

ಕಡೂರು: ಯುವ ಸಮೂಹಗಳನ್ನು ಸಂಘಟಿತಗೊಳಿಸಲು ಗಣೇಶ ಮಹೋತ್ಸವದ ವೇದಿಕೆಗಳು ಹೆಚ್ಚು ಸಹಕಾರಿ ಎಂದು ಪುರಸಭೆ ಸದಸ್ಯ ತೋಟದಮನೆ ಮೋಹನ್‌ಕುಮಾರ್ ತಿಳಿಸಿದರು.
ಪಟ್ಟಣದ ದೊಡ್ಡಪೇಟೆಯ ಶ್ರೀರಾಮದೇವರಗುಡಿ ಬೀದಿ ಆವರಣದಲ್ಲಿ ಶ್ರೀರಾಮ ಯುವಕ ಸಂಘದಿಂದ ಪ್ರತಿಷ್ಟಾಪಿಸಿದ್ದ ಶ್ರೀಗಣೇಶಮೂರ್ತಿ ವಿಸರ್ಜನಾ ಮಹೋತ್ಸವದ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ. 15 ದಿನಗಳಿಂದ ಪ್ರತಿಷ್ಟಾಪಿಸಿದ್ದ ಸ್ವಾಮಿಗೆ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಸಂಭ್ರಮದಿಂದ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಗುವುದು ಎಂದು ತಿಳಿಸಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ಕಲಾ ತಂಡಗಳೊಂದಿಗೆ ವಿಸರ್ಜನಾ ಮೆರವಣೆಗೆ ನಡೆಸಲಾಯಿತು. ಕಾಂಗ್ರೆಸ್ ಯುವ ಮುಖಂಡ ಮಂಜುನಾಥ್, ಚಂದ್ರು, ದಳವಾಯಿ ರಘು, ಪೇಟೆ ಕುಮಾರ್, ಕೃಷ್ಣ, ಕೆ.ಎನ್.ಚೇತನ್‌ಕುಮಾರ್, ಚಂದನ್ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net