ಅಧ್ಯಕ್ಷರಾಗಿ ಗಣೇಶ್​ ಕುಲಾಲ್​ ಆಯ್ಕೆ

Btw_Ganesh Kulal
Published on

ಬಂಟ್ವಾಳ: ಜೆಸಿಐ ಬಂಟ್ವಾಳದ 2025ನೇ ಸಾಲಿನ ಅಧ್ಯಕ್ಷರಾಗಿ ಗಣೇಶ್​ ಕುಲಾಲ್​ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಟಕದ ಅಧ್ಯೆ ರಶ್ಮಿ ಶೆಟ್ಟಿ ಅಧ್ಯಕ್ಷತೆಯಲ್ಲಿ, ನಿಟಕಪೂರ್ವಾಧ್ಯಕ್ಷ ರಾಜೇಂದ್ರ ಕೆ.ಉಪಸ್ಥಿತಿಯಲ್ಲಿ ನಡೆದ ಮಾಸಿಕ ಸಭೆಯಲ್ಲಿ ಈ ಆಯ್ಕೆ ನಡೆಯಿತು.

ಕಾರ್ಯದರ್ಶಿಯಾಗಿ ಕಿಶೋರ್​ ಆಚಾರ್ಯ, ಕೋಶಾಧಿಕಾರಿಯಾಗಿ ಜೀವಿತಾ ಯತೀಶ್​ ಕರ್ಕೆರ, ವಿವಿಧ ವಿಭಾಗಗಳ ಉಪಾಧ್ಯಕ್ಷರಾಗಿ ಶ್ರೀನಿವಾಸ ಅರ್ಬಿಗುಡ್ಡೆ, ಉಮೇಶ್​ ಪೂಜಾರಿ, ಮನೋಜ್​ ಕನಪಾಡಿ, ಕಿರಣ್​, ವಚನ್​ ಶೆಟ್ಟಿ, ವಿಮಲ ಶ್ರೀನಿವಾಸ್​, ಲೇಡಿ ಜೇಸಿ ಸಂಯೋಜಕಿಯಾಗಿ ಬಬಿತಾ ಗಣೇಶ್​, ಜೆಜೆಸಿ ಸಂಯೋಜಕರಾಗಿ ಸಂತೋಷ್​ ಜೈನ್, ನಿರ್ದೇಶಕರಾಗಿ ವೆಂಕಟೇಶ್​, ಅಕ್ಷಯ್​, ನಾಗೇಶ್​ ಸಜೀಪ, ರವೀನಾ ಬಂಗೇರ, ಆಶಾಮಣಿ ರೈ, ಶಿವರಾಮ ಮರ್ತಾಜೆ, ನಾರಾಯಣ ಪೆರ್ನೆ, ದೀಪ್ತಿ ರೈ ಆಯ್ಕೆಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net