ದಿಡಗದಲ್ಲಿ ಗಣೇಶ ಮೂರ್ತಿ ವಿಸರ್ಜನಾ ಮಹೋತ್ಸವ

24 HRS 01
ಹಿರೀಸಾವೆ ಹೋಬಳಿ ದಿಡಗ ಗ್ರಾಮದಲ್ಲಿ ವಿನಾಯಕ ವರ್ತಕರ ಸಂಗದ ವತಿಯಿಂದ ಗಣೇಶ ಮೂರ್ತಿ ವಿಸರ್ಜನಾ ಮಹೋತ್ಸವ ನಡೆಯಿತು. ರಾಮಚಂದ್ರಯ್ಯ, ಕೆ.ಪಿ.ರಾಮಕೃಷ್ಣ, ಮಹೇಶ್. ಎಸ್.ಕುಮಾರ್, ನಾಗರಾಜ್, ಅನಂತ್, ಶಂಕರ್, ಜ್ಯೋತೀಶ್, ಮೂರ್ತಿ ಇದ್ದರು.
Published on

ಹಿರೀಸಾವೆ: ಹೋಬಳಿಯ ದಿಡಗ ಗ್ರಾಮದ ಶ್ರೀ ವಿನಾಯಕ ವರ್ತಕರ ಸಂಘದ ವತಿಯಿಂದ ಶ್ರೀ ಗೌರಿ ಹಾಗೂ ಗಣೇಶ ಮೂರ್ತಿಯ ವಿಸರ್ಜನಾ ಮಹೋತ್ಸವ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.


ಗಣೇಶ ಚತುರ್ಥಿ ದಿನದಂದು ಇಲ್ಲಿನ ಶ್ರೀ ವಿನಾಯಕ ಮಂದಿರದಲ್ಲಿ ಗೌರಿ ಹಾಗೂ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ದಿನನಿತ್ಯ ವಿಶೇಷ ಪೂಜೆಯೊಂದಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತಿದ್ದವು. ವಿಸರ್ಜನೆ ಹಿನ್ನೆಲೆಯಲ್ಲಿ ಮುಂಜಾನೆಯೇ ಶ್ರೀ ವಿನಾಯಕ ಮಂದಿರಕ್ಕೆ ಹಸಿರು ಚಪ್ಪರ ಹಾಕಲಾಯಿತು. ವಿವಿಧ ಪುಷ್ಪಗಳಿಂದ ಗಣೇಶ ಮೂರ್ತಿಯನ್ನು ಸಿಂಗರಿಸಲಾಯಿತು. ಗ್ರಾಮದ ಮಹಿಳೆಯರು ಹಣ್ಣು-ಕಾಯಿ ಅರ್ಪಿಸಿ, ಗಂಧ-ಕರ್ಪೂರ ಬೆಳಗಿಸಿದರು. ಶ್ರೀ ಗೌರಿಗೆ ಮಡಿಲಕ್ಕಿ ಅರ್ಪಿಸಿದರು.
ತೆರೆದ ವಾಹನದ ಮೇಲೆ ಸಿಂಗರಿಸಿದ್ದ ಪುಷ್ಪ ಮಂಟಪದಲ್ಲಿ ಗೌರಿ ಹಾಗೂ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಮಂಗಳವಾದ್ಯದೊಂದಿಗೆ ಮೆರವಣಿಗೆ ಪ್ರಾರಂಭಗೊಂಡು ಪ್ರಮುಖ ಬೀದಿಗಳಲ್ಲಿ ಸಾಗಿತು. ಉತ್ಸವ ದಿಡಗ ಗ್ರಾಮದ ಕೆರೆಗೆ ಸಾಗಿತು. ಕೆರೆ ದಡದಲ್ಲಿ ಶ್ರೀ ಗೌರಿ ಹಾಗೂ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಮೂರ್ತಿಯನ್ನು ವಿಸರ್ಜಿಸಲಾಯಿತು.


ಪ್ರಧಾನ ಅರ್ಚಕ ರಾಮಚಂದ್ರಯ್ಯ ಪೂಜಾ ಕಾರ್ಯಕ್ರಮ ನಡೆಸಿಕೊಟ್ಟರು. ಬಳಿಕ ಪ್ರಸಾದ ವಿನಿಯೋಗ ನಡೆಯಿತು. ಸಂಘದ ಅಧ್ಯಕ್ಷ ಕೆ.ಪಿ.ರಾಮಕೃಷ್ಣ, ಉಪ ಕಾರ್ಯದರ್ಶಿ ಎಚ್.ಆರ್.ಮಹೇಶ್, ಖಜಾಂಚಿ ಎಸ್.ಕುಮಾರ್, ಪ್ರಮುಖರಾದ ಎನ್.ಎನ್.ನಾಗರಾಜ್, ಕೆ.ಟಿ.ನಾಗರಾಜ್, ಡಿಶ್ ಶಂಕರ್, ಜ್ಯೋತೀಶ್, ಅನಂತ್, ಗಣೇಶ್, ಮೂರ್ತಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net