

>ಪವನ್ ಆಚಾರ್ಯ ನೀರ್ಚಾಲು ಬೆಂಗಳೂರು
ಸಾಸಿವೆಗಿಂತ ಸಣ್ಣ ಗಾತ್ರದಲ್ಲಿ ವಿವಿಧ ಅದ್ಭುತ ಕಲಾಕೃತಿಯನ್ನು ರಚಿಸುವ ಮೂಲಕ ಸದಾ ಕಲಾಪ್ರೇಮಿಗಳ ಗಮನ ಸೆಳೆಯುವ ಗಡಿನಾಡ ಜಿಲ್ಲೆಯ ಅಪರೂಪದ ಕಲಾವಿದ, ಕಾಸರಗೋಡು (ಕೇರಳ)ಮುಳ್ಳೇರಿಯಾ ಸಮೀಪದ ತಲೆಬೈಲು ನಿವಾಸಿ ವೆಂಕಟೇಶ್ ಆಚಾರ್ಯ ಅವರು ಗಣೇಶ ಹಬ್ಬದ ಸಂಭ್ರಮವನ್ನು ಹೆಚ್ಚಿಸಲು ಸಾಸಿವೆಗಿಂತ ಸಣ್ಣ ಗಾತ್ರದ ಗಣೇಶನ ಕಲಾಕೃತಿಯನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚಿನ್ನ, ಬೆಳ್ಳಿ, ಕಂಚು, ಜೇಡಿ ಮಣ್ಣು ಇತ್ಯಾದಿಗಳಲ್ಲಿ ವಿಭಿನ್ನ ಗಾತ್ರದಲ್ಲಿ, ಬಗೆಬಗೆಯ ವಿನ್ಯಾಸದಲ್ಲಿ, ಆರ್ಸಿಬಿ, ಆಪರೇಷನ್ ಸಿಂಧೂರ ಮುಂತಾದ ಕಾಂನ್ಸೆಪ್ಟ್ನಲ್ಲೂ ಗಣಪನ ವಿಗ್ರಹಗಳನ್ನು ನೋಡಿದ್ದೇವೆ. ಆದರೆ, ಇದು ಅವೆಲ್ಲದುದಕ್ಕಿಂತ ವಿಭಿನ್ನವಾದ ಪ್ರಯೋಗವಾಗಿದೆ. ಚಿನ್ನದ ಕೆಲಸಕ್ಕೆ ಉಪಯೋಗಿಸುವ ಗಮ್ ಹಾಗೂ ಬಣ್ಣಗಳನ್ನು ಬಳಸಿ ಈ ಕಲಾಕೃತಿಯನ್ನು ರಚಿಸಲಾಗಿದೆ. ವಿನಾಯಕನ ಮೂರ್ತಿ ಹೇಗೆ ಮೂಡಿ ಬಂದರೂ ಮುದ್ದು ಮುದ್ದಾಗಿ ಕಾಣುವುದರಲ್ಲಿ ಸಂದೇಹವಿಲ್ಲ. ಈ ಮೂರ್ತಿಯೂ ಹಾಗೇ ಅಷ್ಟು ಸಣ್ಣ ಗಾತ್ರವಾದರೂ ಸೊಂಡಿಲು, ಕಿವಿಗಳು, ಕೇಸರಿ ಬಣ್ಣದಲ್ಲಿರುವ ವಸ್ತ್ರ ವಿನ್ಯಾಸ, ಆಭರಣಗಳು ಎಲ್ಲವೂ ತುಂಬಾ ಅಚ್ಚುಕಟ್ಟಾಗಿ ಮೂಡಿಬಂದಿದೆ. ಇವರ ವೈಶಿಷ್ಟ$್ಯ ಪೂರ್ಣ ಕೃತಿಗಳಿಗೆ ವ್ಯಾಪಕ ಮೆಚ್ಚುಗೆಗಳು ವ್ಯಕ್ತವಾಗಿದೆ.
ಕಲಾಕೃತಿಗಳನ್ನು ಸಾಮಾನ್ಯವಾಗಿ ಎಲ್ಲರೂ ರಚಿಸುತ್ತಾರೆ. ಅದರಲ್ಲಿ ಏನಾದರೂ ಹೊಸತನ ತರಬೇಕು, ಎಲ್ಲ ಕೃತಿಗಳಿಂದ ಭಿನ್ನವಾಗಿರಬೇಕೆಂಬ ನಿಟ್ಟಿನಲ್ಲಿ ಮೈಕ್ರೋ ಆರ್ಟ್ ಆನ್ನು ಆಯ್ಕೆ ಮಾಡಿಕೊಂಡೆ. ನನಗೆ ಚಿಕ್ಕಂದಿನಿಂದಲೂ ದೇವರ ಮೇಲೆ ಅಪಾರವಾದ ಭಕ್ತಿ, ದೇಶದ ಕುರಿತು ಅಭಿಮಾನ ಇದೆ. ಆದ್ದರಿಂದಲೇ ನಾನು ಆಯ್ಕೆ ಮಾಡಿಕೊಳ್ಳುವ ವಿಷಯಗಳು ಬಹುತೇಕ ಭಕ್ತಿ ಆಧಾರಿತವಾಗಿಯೇ ಇರುತ್ತದೆ. ರಚಿಸಿರುವ 30ಕ್ಕೂ ಅಧಿಕ ಕಲಾಕೃತಿಗಳಲ್ಲಿ ಬಹುತೇಕ ಭಕ್ತಿ ಹಾಗೂ ದೇಶಭಕ್ತಿಯನ್ನು ಸಾರುವಂಹ ರಚನೆಗಳು ಇರುವುದು ಅದಕ್ಕೆ ನಿದರ್ಶನ ಎನ್ನುತ್ತಾರೆ ವೆಂಕಟೇಶ್.
2022ರಲ್ಲಿ ರಚಿಸಿರುವ ಸಾಸಿವೆಗಿಂತ ಸಣ್ಣ ಗಾತ್ರದ ತ್ರಿವರ್ಣ ಧ್ವಜದ ಕಲಾಕೃತಿಯ ಮೂಲಕ ಗುರುತಿಸಿಕೊಂಡ ಇವರು, ಅತ್ಯಂತ ಸೂಕ್ಷ$್ಮವಸ್ತುಗಳಲ್ಲಿ ಮೈಕ್ರೋ ಆರ್ಟ್ಗಳನ್ನು ಸೃಷ್ಟಿಸಬಲ್ಲ ಸೃಜನಶೀಲ ಕಲಾವಿದ ಎಂದು ಹೆಸರುವಾಸಿಯಾದರು. ಕೇರಳದ ವಿಧಾನಸಭೆಯಲ್ಲಿ ಇವರ ಸಾಧನೆ ಮತ್ತು ಜೀವನ ಕುರಿತು ಮಂಜೇಶ್ವರ ಶಾಸಕರು ಉಲ್ಲೇಖ ಮಾಡಿದ್ದರು. ವಿಶಿಷ್ಟ ಸಾಧನೆಗಳು: ಪುಟ್ಟ ಇಚ್ಲಂಗೋಡು ಎಂಬ ಕಾವ್ಯ ನಾಮದ ಮೂಲಕ ಮೈಕ್ರೋ ಕಲಾಕೃತಿಗಳನ್ನು ರಚಿಸುವ ಇವರು ಒಂದು ಅಕ್ಕಿಕಾಳಿನ ಗಾತ್ರದಲ್ಲಿ ಕೇವಲ 10 ಮಿ.ಗ್ರಾಂ.ತೂಕದ ಚಿನ್ನದಲ್ಲಿ ಸ್ವಚ್ಛಭಾರತ್ ಲಾಂಛನ, ಅಮರ್ ಜವಾನ್, ಅಗ್ನಿಫಥ್ ಸೈನಿಕ ಪ್ರತಿಕೃತಿಗಳು, ನವಧಾನ್ಯಗಳಲ್ಲಿ ಆಯೋಧ್ಯೆ ನಿಮಾರ್ಣ, ಅರ್ಧ ಇಂಚಿನ ಕಾಗದದಲ್ಲಿ 2014ರ ಕ್ಯಾಲೆಂಡರ್ ತಯಾರಿ ಹೀಗೆ ಹಲವು ವಿಶಿಷ್ಟ ಸಾಧನೆಗಳನ್ನು ಮಾಡಿದ್ದಾರೆ.
ಚಿನ್ನಾಭರಣ ನಿಮಾರ್ಣ ವೃತ್ತಿ ಜತೆಗೆ ಪ್ರವೃತ್ತಿಯಾಗಿ ಮೈಕ್ರೋ ಆರ್ಟ್ ಮಾಡುತ್ತಿದ್ದು, ತಯಾರಿಗೆ ಯಾವುದೇ ಲೆನ್ಸ್ ಅಥವಾ ವಿಶಿಷ್ಟ ಉಪಕರಣಗಳನ್ನು ಬಳದೆ, ಸೂಜಿ ಇತ್ಯಾದಿ ಸಮಾನ್ಯವಾಗಿ ಸಿಗುವ ಉಪಕರಣಗಳಿಂದ ಬರೀ ಕಣ್ಣಿನಿಂದಲೇ ಕಲಾಕೃತಿಗಳನ್ನು ರಚಿಸುತ್ತೇನೆ. ಒಂದು ಅಂಚೆ ಕಾರ್ಡ್ನಲ್ಲಿ 'ಓಂ ನಮ@ ಶಿವಾಯ' ಎಂದು 6,524 ಬಾರಿ ಶಿವ ಪಂಚಾಕ್ಷರಿ ಮಂತ್ರ ಬರೆದಿದ್ದು, 45,668 ಅಕ್ಷರದಲ್ಲಿ ಶಿವನಚಿತ್ರ ಬರೆಯುವ ಮೂಲಕ ಇಂಥ ಕಲಾಕೃತಿ ನಿರ್ಮಾಣಕ್ಕೆ ಪಾದಾರ್ಪಣೆ ಮಾಡಿದ್ದೆ. ಅಲ್ಲಿಂದ ಸಿಕ್ಕಿದ ಪ್ರೋತ್ಸಾಹ ಈಗಲೂ ನನ್ನ ಈ ಪ್ರವೃತ್ತಿಗೆ ಉತ್ತೇಜನೆ ನೀಡುತ್ತಿದೆ. > ವೆಂಕಟೇಶ್, ಮೈಕ್ರೋ ಆರ್ಟ್ ಕಲಾವಿದ
ಭಾಷೆ, ಧರ್ಮ ಮೀರಿದ ಕಲಾಕೃತಿಗಳು ಸಾಸಿವೆಗಿಂತ ಚಿಕ್ಕ ಶಿವಲಿಂಗ, ಒಂದು ಅಕ್ಕಿಕಾಳಿನಲ್ಲಿ 36 ಇಂಗ್ಲಿಷ್ ಅಕ್ಷರ, 60 ಮಿ.ಗ್ರಾಂ. ಚಿನ್ನದಲ್ಲಿ ಕ್ರಿಕೆಟ್ ವಿಶ್ವಕಪ್, 60 ಮಿ.ಗ್ರಾಂ. ಫಿಾ ವಿಶ್ವಕಪ್, ಪೆನ್ಸಿಲ್ ಲೆಡ್ನಿಂದ ವಿಶ್ವಕಪ್, ಯೋಗಾಸನದ ಭಂಗಿ, ದೀಪಾವಳಿಗೆ ಉರಿಸುವ ಹಣತೆ, ಭಾರತದ 29 ರಾಜ್ಯದ ಹೆಸರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ, ಕೇವಲ 5ಮಿ.ಗ್ರಾಂನಲ್ಲಿ ರೂಪಾಯಿ ಲೋಗೋ, 100 ಮಿ.ಗ್ರಾಂನಲ್ಲಿ ಕ್ರಿಕೆಟ್ ಪಿಚ್, ಅಕ್ಕಿ ಕಾಳು ಗಾತ್ರದ ತುಳುನಾಡ ಧ್ವಜ, ಕಾಂತಾರ ಸಿನಿಮಾದ ದೈವದ ಪ್ರತಿಕೃತಿ, ಬೆಂಕಿ ಕಡ್ಡಿಯ ತುದಿಗಾತ್ರದ ಶಬರಿ ಮಲೆ ಸನ್ನಿಧಾನ, ಪಾರ್ಲಿಮೆಂಟ್, ಕ್ರಿಸ್ಮಸ್ ಗೊದುಲಿ, ಮಕ್ಕಾ ಮಾದೀನ ಹೀಗೆ ಭಾಷೆ, ಜಾತಿ, ಧರ್ಮ ಎಲ್ಲವನ್ನು ಮೀರಿದ ಕಲಾಕೃತಿ ಇವರದ್ದಾಗಿದೆ.