

ಬೇಲೂರು: ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿಯಿಂದ ಪಟ್ಟಣದ ಜ್ಯೂನಿಯರ್ ಕಾಲೇಜು ಆವರಣದ ರಂಗ ಮಂದಿರದಲ್ಲಿ 68ನೇ ವರ್ಷದ ಗಣೇಶ ಮೂರ್ತಿಯನ್ನು ಬುಧವಾರ ಪ್ರತಿಷ್ಠಾಪಿಸಲಾಗಿದ್ದು, ಸಾರ್ವಜನಿಕರು ಸಹಕಾರ ನೀಡಬೇಕೆಂದು ಸಮಿತಿ ಅಧ್ಯಕ್ಷ ಎಂ.ವಿ. ಮಂಜುನಾಥ್ ಮನವಿ ಮಾಡಿದರು.
ಗಣೇಶ ಮೂರ್ತಿ ಪ್ರತಿಷ್ಠಾಪನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಿತಿ ಸದಸ್ಯರು ಹಾಗೂ ನಾಗರಿಕರ ಸಹಕಾರದಿಂದ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಮುಂದಿನ 24 ದಿನ ನಿತ್ಯ ವಿವಿಧ ಪೂಜಾ ಕಾರ್ಯ ನೆರವೇರಲಿದೆ ಎಂದರು.
ಗೌರವಾಧ್ಯಕ್ಷ ಪೈಂಟ್ ರವಿ ಮಾತನಾಡಿದರು. ಸಮಿತಿ ಕಾರ್ಯಾಧ್ಯಕ್ಷ ಬಿ.ಸಿ.ಉಮೇಶ್, ಪ್ರಧಾನ ಕಾರ್ಯದರ್ಶಿ ಪ್ರಸನ್ನ, ಉಪಾಧ್ಯಕ್ಷರಾದ ರಾಜು, ಶ್ರೀಧರ್, ಕೋಳಿ ಚಂದ್ರು, ಪಿಡಿಒ ಪರಮೇಶ್, ಮುಖಂಡರಾದ ನಿವೀತ್‌ಗೌಡ, ಸುನಿಲ್, ಶಿವೇಗೌಡ, ವಿಶ್ವನಾಥ್ ಇತರಿದ್ದರು.