ಹಬ್ಬ ಸೌಹಾರ್ದತೆಯಿಂದ ಆಚರಿಸಿ

ganesh festival peace meeting yalaburga koppal
ಯಲಬುರ್ಗಾದ ಪೊಲೀಸ್​ ಠಾಣೆ ಆವರಣದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಶಾಂತಿ ಸಭೆಯಲ್ಲಿ ಸಿಪಿಐ ಮೌನೇಶ್ವರ ಮಾಲಿಪಾಟೀಲ್​ ಮಾತನಾಡಿದರು. ಪಪಂ ಅಧ್ಯಕ್ಷ ಅಂದಯ್ಯ ಕಳ್ಳಿಮಠ, ತಹಸೀಲ್ದಾರ್​ ಬಸವರಾಜ ತೆನ್ನಳ್ಳಿ, ಪಪಂ ಮುಖ್ಯಾಧಿಕಾರಿ ನಾಗೇಶ, ಪಿಎಸ್​ಐ ವಿಜಯ ಪ್ರತಾಪ ಇದ್ದರು.
Published on

ಕೊಪ್ಪಳ: ಗಣೇಶ ಉತ್ಸವ ಸಂಸ್ಕತಿ, ಸಂಪ್ರದಾಯ ಬಿಂಬಿಸುವ ಹಬ್ಬವಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ವಹಿಸುವ ಮೂಲಕ ಹಬ್ಬ ಆಚರಿಸಬೇಕು ಎಂದು ಸಿಪಿಐ ಮೌನೇಶ್ವರ ಮಾಲಿಪಾಟೀಲ್​ ಹೇಳಿದರು.

ಯಲಬುರ್ಗಾ ಪಟ್ಟಣದ ಪೊಲೀಸ್​ ಠಾಣೆ ಆವರಣದಲ್ಲಿ ಗೌರಿ ಗಣೇಶ ಹಾಗೂ ಈದ್​ಮಿಲಾದ್​ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ಸಾರ್ವಜನಿಕ ಶಾಂತಿ ಸಭೆಯಲ್ಲಿ ಮಾತನಾಡಿದರು.

ಪಟ್ಟಣವು ಶಾಂತಿ ಸೌಹಾರ್ದತೆಗೆ ಹೆಸರಾಗಿದೆ. ಗೌರಿ ಗಣೇಶ ಮತ್ತು ಈದ್​ಮಿಲಾದ್​ನ್ನು ಶಾಂತಿಯುತ ಆಚರಿಸಬೇಕು. ಸಾರ್ವಜನಿಕವಾಗಿ ವಿವಿಧ ಸಂಘ ಸಂಸ್ಥೆಗಳು ಗಣೇಶ ಮೂರ್ತಿ ಪ್ರತಿಫಿ್ಠಾಪಿಸುವ ಮುನ್ನ ನಿಯಮ ಪಾಲಿಸಬೇಕು. ಧ್ವನಿವರ್ಧಕ ಬಳಕೆಗೆ ಪೊಲೀಸ್​ ಇಲಾಖೆ ಅನುಮತಿ ಕಡ್ಡಾಯವಾಗಿದೆ. ಗಣೇಶ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುವ ಮೂಲಕ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಅನುಸರಿಸಬೇಕು. ಗಣೇಶ ವಿಗ್ರಹಗಳನ್ನು ಪಪಂ ಸ್ಥಳ ನಿಗದಿ ಮಾಡಿದ ಕಡೆ ವಿಸರ್ಜಿಸಬೇಕು. ಮುಸ್ಲಿಂ ಬಾಂಧವರು ಈದ್​ಮಿಲಾದ್​ನ್ನು ಸೌಹಾರ್ದತೆಯಿಂದ ಆಚರಿಸಬೇಕು. ಎಲ್ಲರೂ ಪೊಲೀಸ್​ ಇಲಾಖೆಯೊಂದಿಗೆ ಸಹಕರಿಸಬೇಕು ಎಂದರು.

ಈ ಸಂದರ್ಭ ಪಪಂ ಅಧ್ಯಕ್ಷ ಅಂದಯ್ಯ ಕಳ್ಳಿಮಠ, ತಹಸೀಲ್ದಾರ್​ ಬಸವರಾಜ ತೆನ್ನಳ್ಳಿ, ಪಪಂ ಮುಖ್ಯಾಧಿಕಾರಿ ನಾಗೇಶ, ಪಿಎ??? ವಿಜಯ ಪ್ರತಾಪ, ಸಾರಿಗೆ ಘಟಕ ವ್ಯವಸ್ಥಾಪಕ ರಮೇಶ ಚಿಣಗಿ, ಪ್ರಮುಖರಾದ ಅಂದಾನಗೌಡ ಉಳ್ಳಾಗಡ್ಡಿ, ವೀರಣ್ಣ ಹುಬ್ಬಳ್ಳಿ, ಸಿದ್ರಾಮೇಶ ಬೆಲೇರಿ, ವಸಂತ ಭಾವಿಮನಿ, ಅಖ್ತರ್​ಸಾಬ್​ ಖಾಜಿ, ಅಶೋಕ ಅರಕೇರಿ, ಹನುಮಂತ ಭಜಂತ್ರಿ, ಹಾಗೂ ಭಗತ್​ ಸಿಂಗ್​ ಗಣೇಶ ಮಂಡಳಿ ಪದಾಧಿಕಾರಿಗಳು ಸೇರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net