

ಶಿರಸಿ: ನಗರದ ಮರಾಠಿಕೊಪ್ಪ ಗಣೇಶೋತ್ಸವ ಆಚರಣೆ ಈಗ 50ರ ಸಂಭ್ರಮದಲ್ಲಿದೆ. ಈ ವರ್ಷ ಪ್ರತಿ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ವಿಶೇಷವಾಗಿ ಆಚರಿಸಲು ನಿರ್ಧರಿಸಿದ್ದೇವೆ ಎಂದು ಗಣೇಶೋತ್ಸವ ಸಮಿತಿ ಸದಸ್ಯ ನಂದನ ಸಾಗರ ಹೇಳಿದರು.
ನಗರದ ಮರಾಠಿಕೊಪ್ಪದಲ್ಲಿ ಶನಿವಾರ 50ನೇ ವರ್ಷಾಚರಣೆಯ ಲಾಂಛನ ಬಿಡುಗಡೆಯಲ್ಲಿ ಅವರು ಮಾತನಾಡಿದರು.
6.5 ಅಡಿ ಎತ್ತರದ ಗಣೇಶ ಮೂರ್ತಿ ತಯಾರಿಕೆ ಕಾರ್ಯ ಈಗ ಭರದಿಂದ ನಡೆಯುತ್ತಿದೆ. ಆ. 27ರಂದು ಗಣೇಶ ಮೂರ್ತಿಯನ್ನು ಮಂಟಪದಲ್ಲಿ ಪ್ರತಿಷ್ಠಾಪಿಸಲಾಗುತ್ತಿದೆ. ಅಂದಿನಿಂದ ಸೆ. 8ರವರೆಗೂ ಪ್ರತಿ ದಿನ ಸಂಜೆ 6ರಿಂದ 10 ಗಂಟೆಯವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಸೆ. 8ರಂದು ಅದ್ದೂರಿಯಾಗಿ ಗಣೇಶ ಮೂರ್ತಿ ವಿಸರ್ಜನಾ ಕಾರ್ಯ ನಡೆಸಲಾಗುತ್ತದೆ ಎಂದರು.
ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್, ನಗರಸಭೆ ಅಧ್ಯಕ್ಷೆ ಶರ್ವಿುಳಾ ಮಾದನಗೇರಿ, ಕಿರಣ ಚಿತ್ರಕಾರ, ನಾಗರಾಜ ಗಂಗೊಳ್ಳಿ, ಲಿಂಗಪ್ಪ ಕೊಂಡ್ಲಿ, ವಿನಾಯಕ ಶೆಟ್ಟಿ, ಶಕುಂತಲಾ ಶೆಟ್ಟಿ, ಶ್ರೀಧರ ಮೊಗೇರ ಇತರರಿದ್ದರು.