ಗಣೇಶ ವಿಸರ್ಜನೆಯಲ್ಲಿ ನಿಯಮ ಉಲ್ಲಂಘನೆ: ಡಿಜೆಗಳು ವಶ

IMG_20220903_121836.jpg
Published on


ಹೊಸಪೇಟೆ: 3ನೇ ದಿನದ ಗಣೇಶ ವಿಸರ್ಜನೆ ವೇಳೆ ನಿಯಮ ಮೀರಿ ನಗರದಲ್ಲಿ ಬಳಕೆ ಮಾಡಿದ್ದ  ಡಿಜೆಗಳನ್ನು ವಶಕ್ಕೆ ಪಡೆಯುವ ಮೂಲಕ ಜಿಲ್ಲಾ ಪೊಲೀಸ್ ಇಲಾಖೆ ಗಣೇಶೋತ್ಸವ ‌ಸಮಿತಿಗಳಿಗೆ ಶಾಕ್ ನೀಡಿದೆ.
ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ 3 ಕೇಸ್ ಗಳು, ಗ್ರಾಮೀಣ ಮತ್ತು ಬಡಾವಣೆ ಪೊಲೀಸ್ ಠಾಣೆಗಳಲ್ಲಿ ತಲಾ ಒಂದು ಕೇಸ್ ಪ್ರಕರಣ ದಾಖಲಾಗಿದೆ.‌
ಹಗರಿಬೊಮ್ಮನ ಹಳ್ಳಿ ತಾಲೂಕಿನ ತಂಬ್ರಳ್ಳಿಯಲ್ಲಿಯೂ ಒಂದು ಪ್ರಕರಣ ದಾಖಲಾಗಿದೆ. ಡಿಜೆ ಹಾಗೂ ಫೈರ್ ಕಾಯ್ದೆ ಉಲ್ಲಂಘನೆ ಐಪಿಸಿ 290 ಮತ್ತು 188 ಅನ್ವಯ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಅನಧಿಕೃತ ‌ಡಿಜೆ ಬಳಕೆಗೆ ಸಂಬಂಧಿಸಿದಂತೆ ಸಿಸಿಟಿವಿ ದೇಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.‌ ಡಿಜೆ ಬಳಕೆ ದೃಢಪಟ್ಟರೆ ಮತ್ತಷ್ಟು ಪ್ರಕರಣಗಳು ದಾಖಲಾಗಲಿವೆ ಎಂದು ಎಸ್ಪಿ ಡಾ.ಅರುಣ್ ಕೆ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net