ಗಣೇಶೋತ್ಸವ ಬ್ಯಾನರ್ ಹರಿದಾತನ ಬಂಧನ

Arrest
Arrest
Published on

ಬಂಟ್ವಾಳ: ಫರಂಗಿಪೇಟೆ ಗಣೇಶೋತ್ಸವ ಬ್ಯಾನರ್ ಹರಿದು ಹಾಕಿದ ಆರೋಪಿಯ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸರು ಬುಧವಾರ ಆತನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಫರಂಗಿಪೇಟೆ ನಿವಾಸಿ ಹೈದರ್ ಆರೋಪಿಯಾಗಿದ್ದು, ಪೊಲೀಸರು ಆತನನ್ನು ವಿಚಾರಣೆ ನಡೆಸಿದ್ದಾರೆ. ಗಣೇಶೋತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ ಆಳ್ವ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದು ಫರಂಗಿಪೇಟೆಯ ಕುಂಪಣಮಜಲು ಕ್ರಾಸ್ ಬಳಿ ಬ್ಯಾನರ್ ಅಳವಡಿಸಿದ್ದರು. ಆರೋಪಿ ಹೈದರ್ ಅದನ್ನು ಹರಿದು ಹಾಕಿದ್ದು, ಕೋಮುಗಲಭೆ ಸೃಷ್ಟಿಸಲು ಉದ್ದೇಶಪೂರ್ವಕವಾಗಿ ಕೃತ್ಯ ನಡೆಸಿರುವುದರಿಂದ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net