ಸೌಹಾರ್ದತೆಯ ಸಂಕೇತ ಗಣೇಶ ಹಬ್ಬ

h4-mahamandala ganesha
Published on

ಹುಬ್ಬಳ್ಳಿ: ಹುಬ್ಬಳ್ಳಿಯ ಗಣೇಶೋತ್ಸವವು ರಾಜ್ಯದಲ್ಲಿಯೇ ಮೊದಲ ಸ್ಥಾನ ಪಡೆದಿರುವುದು ಹೆಮ್ಮೆಯ ವಿಷಯ. ಎಲ್ಲ ಧರ್ಮದವರು ಸೇರಿ ಆಚರಿಸುವ ಈ ಹಬ್ಬವು ಶಾಂತಿ ಮತ್ತು ಸೌಹಾರ್ದತೆಯ ಸಂಕೇತವಾಗಿದೆ ಎಂದು ಶಾಸಕ, ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಅಭಿಪ್ರಾಯಪಟ್ಟರು.

ಹುಬ್ಬಳ್ಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳ ವತಿಯಿಂದ ಹಳೇ ಹುಬ್ಬಳ್ಳಿಯ ದುರ್ಗದಬೈಲ್‌ನಲ್ಲಿ ಗುರುವಾರ ಏರ್ಪಡಿಸಿದ್ದ ಸಾಮೂಹಿಕ ವಿಸರ್ಜನಾ ಮೆರವಣಿಗೆ ಉದ್ಘಾಟಿಸಿ ಅವರು ಮಾತನಾಡಿದರು.

ಭಾವೈಕ್ಯತೆಗೆ ಇನ್ನೊಂದು ಹೆಸರೇ ಹುಬ್ಬಳ್ಳಿ. ಗಣೇಶ ಹಬ್ಬ, ಮೊಹರಂ ಹಬ್ಬವನ್ನು ಎಲ್ಲ ಧರ್ಮೀಯರು ಏಕಮನೋಭಾವದಿಂದ ಆಚರಿಸುತ್ತ ಬಂದಿದ್ದಾರೆ. ಹಾಗಾಗಿ ನಮ್ಮಲ್ಲಿ ಭೇದ-ಭಾವ ಅಳಿದು ಸಹೋದರತೆಯ ಮನೋಭಾವ ಬೆಳೆದಿದೆ ಎಂದರು.

ಮಾಜಿ ಮಹಾಪೌರ ಡಾ. ಪಾಂಡುರಂಗ ಪಾಟೀಲ ಮಾತನಾಡಿ, ಹುಬ್ಬಳ್ಳಿಯ ಗಣೇಶೋತ್ಸವವು ಸಾಮಾಜಿಕವಾಗಿ, ಸಂಘಟನಾತ್ಮಕವಾಗಿ, ಏಕತೆಯ ಮನೋಭಾವನೆಯಿಂದ ಸಂಘಟಿಸುವ ಅಗತ್ಯವನ್ನು ಹಿಂದಿನ ಹಿರಿಯ ಮನಗಂಡಿದ್ದರು. ಅಂತೆಯೇ ಮಹಾಮಂಡಳದಂಥ ವೇದಿಕೆ ಉದಯವಾಯಿತು. 49 ವರ್ಷದಿಂದ ಮಹಾ ಮಂಡಳದ ಸೇವೆ ಅರ್ಥಪೂರ್ಣವಾಗಿ ಮುಂದುವರಿದಿದೆ ಎಂದರು.

ಮಾಜಿ ಶಾಸಕ ಅಶೋಕ ಕಾಟವೆ ಮಾತನಾಡಿ, ಯುವಕರಲ್ಲಿ ಧಾರ್ಮಿಕ, ತತ್ವ ಸಿದ್ಧಾಂತಗಳು, ಏಕತೆಯ ಮಂತ್ರ ಉದಯಿಸಲು ಶ್ರೀ ಗಣೇಶೋತ್ಸವ ಹಬ್ಬವು ಮಹತ್ವದ ವೇದಿಕೆಯಾಗಿದೆ ಎಂದರು.

ಮಹಾಮಂಡಳದ ಅಧ್ಯಕ್ಷ ಮೋಹನ ಲಿಂಬಿಕಾಯಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಳೇ ಹುಬ್ಬಳ್ಳಿ ವೃತ್ತವನ್ನು ನವೀಕರಿಸುವಂತೆ ಕೋರಿದ ಮಹಾಮಂಡಳದ ಕಾರ್ಯದರ್ಶಿ ಅಮರೇಶ ಹಿಪ್ಪರಗಿ ಅವರಿಗೆ ಶಾಸಕ ಪ್ರಸಾದ ಅಬ್ಬಯ್ಯ ಅವರು ವರ್ಷದೊಳಗಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಭರವಸೆ ನೀಡಿದರು.

ಪಾಲಿಕೆ ಸದ್ಯರಾದ ಸುಮಿತ್ರಾ ಗುಂಜಾಳ, ಚಂದ್ರಿಕಾ ಮೇಸ್ತ್ರಿ, ಮೊಹಮ್ಮದ ಆರಿಫ್ ದೊಡ್ಡಮನಿ, ಅರ್ಜುನ ಪಾಟೀಲ, ಹಳೇ ಹುಬ್ಬಳ್ಳಿ ಸಮಿತಿ ಅಧ್ಯಕ್ಷ ಎಸ್.ಎಸ್. ಸಾಲಿಮಠ, ಅಲ್ತಾಫ ಕಿತ್ತೂರ, ಶಾಂತರಾಜ ಪೋಳ, ಎಸ್.ಎಸ್. ಕಮಡೊಳ್ಳಿಶೆಟ್ಟರ್, ಹಿರಿಯ ಕಲಾವಿದರಾದ ಈರಣ್ಣ ಪಾಳೆದ, ಸಿದ್ದಣ್ಣ ಅಂಗಡಿ, ಅಶೋಕ ಬೆಳ್ಳಿಗಟ್ಟಿ, ಮೊಹಮ್ಮದ ಯುಸೂಫ್ ಬಂಗ್ಲೆವಾಲೆ, ಚಮನಸಾಬ್ ಬಟ್ಟಿಬುರಿ, ವಿಮಲ್ ತಾಳಿಕೋಟಿ, ಅನಿಲ ಕವಿಶೆಟ್ಟಿ, ಸಂತೋಷ ಕಾಟವೆ, ಸಂಗೀತಾ ದೇವದಾಸ, ವಿಜಯಲಕ್ಷ್ಮೀ ಏಕಬೋಟೆ, ಲಕ್ಷ್ಮೀ ಮಗಜಿಕೊಂಡಿ, ರೇಖಾ ಏಕಬೋಟೆ, ನಿಖಿಲ್ ಶಿರೂರ, ಕೃಷ್ಣ ಜಾಧವ, ಸಂತೋಷ ಕಿನ್ನಾಳ, ಬಸವರಾಜ ತಿಪ್ಪನಗೌಡರ, ಗುರುರಾಜ ವಡಗಾವಿ, ಚಂದ್ರಕಾಂತ ಗಾಡದ, ಮುತ್ತು ಉಣಕಲ್, ಸಿ.ಜಿ. ಧಾರವಾಡಶೆಟ್ಟರ್ ಉಪಸ್ಥಿತರಿದ್ದರು. ಮಹಾಮಂಡಳದ ಕಾರ್ಯದರ್ಶಿ ಅಮರೇಶ ಹಿಪ್ಪರಗಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net